Thursday, October 15, 2026

Dasara Wishes

Happy Dasara
Home Front Page ಇನ್ಮುಂದೆ 15 ನಿಮಿಷಗಳಲ್ಲಿ ಸ್ಥಳಕ್ಕೆ 108 ಆ್ಯಂಬುಲೆನ್ಸ್: ಹೊಸ ಪ್ರಯತ್ನಕ್ಕೆ ಮುಂದಾದ ಆರೋಗ್ಯ ಇಲಾಖೆ

ಇನ್ಮುಂದೆ 15 ನಿಮಿಷಗಳಲ್ಲಿ ಸ್ಥಳಕ್ಕೆ 108 ಆ್ಯಂಬುಲೆನ್ಸ್: ಹೊಸ ಪ್ರಯತ್ನಕ್ಕೆ ಮುಂದಾದ ಆರೋಗ್ಯ ಇಲಾಖೆ

ಬೆಂಗಳೂರು,ಜುಲೈ,15,2026 (www.justkannada.in):  ದೇಶದಲ್ಲೇ ರಾಜ್ಯದ ಆರೋಗ್ಯ ಇಲಾಖೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು ಗರಿಷ್ಠ 15 ನಿಮಿಷಗಳಲ್ಲಿ 108 ಆಂಬ್ಯುಲೆನ್ಸ್ ಸ್ಥಳಕ್ಕೆ ತೆರಳದಿದ್ದರೇ 5 ಸಾವಿರ ರೂ ದಂಡ ವಿಧಿಸುವ ನಿಯಮ ತರಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ಮುಂದೆ 15 ನಿಮಿಷಗಳಲ್ಲಿ 108 ಆ್ಯಂಬುಲೆನ್ಸ್ ಸ್ಥಳಕ್ಕೆ ಬರಲಿದೆ. ತಡವಾಗಿ ಬರುವ ಆ್ಯಂಬುಲೆನ್ಸ್ ಗೆ 5 ಸಾವಿರ ರೂ ದಂಡ ವಿಧಿಸಲು ಆರೋಗ್ಯ ಇಲಾಖೆ ಮುಂದಾಗಿದೆ.  ಆಂಬ್ಯುಲೆನ್‍ 13 ರಿಂಧ 15 ನಿಮಿಷಗಳಲ್ಲಿ ರೋಗಿ ಇರುವ ಸ್ಥಳ ತಲುಪದೇ ಇದ್ದರೇ ದಂಡದ ಬರೆ ಬೀಳಲಿದೆ.

ಬೆಂಗಳೂರು ಸೇರಿ ಆ್ಯಂಬುಲೆನ್ಸ್ ಚಾಲಕರಿಗೆ 15 ನಿಮಿಷ ಡೆಡ್ ಲೈನ್ ನೀಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎನ್ನಲಾಗಿದ್ದು ಹೊಸದಾಗಿ ಆಂಬ್ಯುಲೆನ್ಸ್ ಖರೀದಿಗೂ ರಾಜ್ಯ ಸರ್ಕಾರ ಮುಂದಾಗಿದೆ.  ಹಳೆಯ ಎಲ್ಲಾ ವಾಹನಗಳನ್ನ ಗುಜರಿಗೆ ಹಾಕುವಂತೆಯೂ ಅಧಿಕಾರಿಗಳಿಗೆ ಆರೋಗ್ಯ ಸಚಿವ ಯು.ಟಿ ಖಾದರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ಇನ್ಮುಂದೆ 15 ನಿಮಿಷಗಳಲ್ಲಿ ಸ್ಥಳಕ್ಕೆ 108 ಆ್ಯಂಬುಲೆನ್ಸ್ 108 ambulance

ನಿಗದಿತ ಸಮಯದಲ್ಲಿ ರೋಗಿಯನ್ನು ಆಸ್ಪತ್ರೆಗೆ ತಲುಪಿಸಬೇಕು. ಟ್ರಾಫಿಕ್ ಜಾಮ್ ನಲ್ಲಿ ಅನಗತ್ಯ ವಿಳಂಬಕ್ಕೆ ಅವಕಾಶವಿಲ್ಲ. ತುರ್ತು ವೈದ್ಯಕೀಯ ಸೇವೆಯಲ್ಲಿ ನಿರ್ಲಕ್ಷ್ಯ ಸಹಿಸುವುದಿಲ್ಲ.  ಆಂಬ್ಯುಲೆನ್ಸ್ ಸೇವೆ ಮತ್ತಷ್ಟು ಪರಿಣಾಮಕಾರಿಯಾಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಚಾಲಕರು ಸೇವಾ ಸಂಸ್ಥೆಗಳೂ ಸಮಯ ಪಾಲನೆ ಕಡ್ಡಾಯ.  ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.ಹೊಸ ಪ್ರಯತ್ನಕ್ಕೆ ಮುಂದಾದ ಆರೋಗ್ಯ ಇಲಾಖೆ jk02_new jk02 new

Key words: 108 ambulance, reach, spot, 15 minutes,  Health Department