Saturday, August 29, 2026

BDA Apartments

Home Front Page CWRC ಮೀಟಿಂಗ್:  ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಸ್ಥಿತಿ ವಿವರಿಸಿದ ಅಧಿಕಾರಿಗಳು

CWRC ಮೀಟಿಂಗ್:  ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಸ್ಥಿತಿ ವಿವರಿಸಿದ ಅಧಿಕಾರಿಗಳು

ಬೆಂಗಳೂರು,ಜುಲೈ,15,2026 (www.justkannada.in): ಕಾವೇರಿ ನೀರು ನಿರ್ವಹಣಾ ಸಮಿತಿಯ(CWRC) ಸಭೆ ನಡೆದಿದ್ದು ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಸ್ಥಿತಿ ಬಗ್ಗೆ ವಿವರಣೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ವರ್ಚೂವಲ್ ಮೂಲಕ ಭಾಗಿಯಾಗಿದ್ದು ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಸ್ಥಿತಿ ಮಳೆ ಕೊರೆತೆ ಬಗ್ಗೆ ವಿವರಣೆ ನೀಡಿದ್ದಾರೆ.

ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲವೆಂದು ಕರ್ನಾಟಕದ ಅಧಿಕಾರಿಗಳು ವಾದ ಮಂಡಿಸಿದ್ದಾರೆ.  ಕಾವೇರಿ ಕೊಳ್ಳದಲ್ಲಿ ಮಳೆ ಅಭಾವವಿದೆ. ಜೂನ್ ತಿಂಗಳಲ್ಲಿ ಜಲಾಶಯಗಳಿಗೆ ಶೂನ್ಯ ಒಳಹರಿವು ಇತ್ತು ಜುಲೈ ತಿಂಗಳಲ್ಲಿ ಹಲವೆಡೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು ಬರಿದಾದ ಡ್ಯಾಂಗಳಿಗೆ ಸ್ವಲ್ಪ ಪ್ರಮಾಣದ ನೀರು ಸಂಗ್ರಹವಾಗಿದೆ ಮಾನ್ಸುನ್ ಮತ್ತೆ ಚುರುಕು ಪಡೆಯುವ ಯಾವ ಮುನ್ಸೂಚನೆ ಇಲ್ಲ. ಸದ್ಯ ಸಂಗ್ರಹವಿರುವ ನೀರನ್ನ ಕುಡಿಯಲು ಬಳಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಆದರೂ ಸಹ ತಮ್ಮ ಪಾಲಿನ ನೀರು ಬಿಡುವಂತೆ ತಮಿಳುನಾಡಿನ  ಅಧಿಕಾರಿಗಳು ವಾದಿಸಿದ್ದಾರೆ. ಆದರೆ CWRC ನೀರು ಬಿಡುವಂತೆ ಕರ್ನಾಟಕಕ್ಕೆ ಯಾವುದೇ ಸ್ಪಷ್ಟ ಸೂಚನೆ  ನೀಡಿಲ್ಲ.

Key words: CWRC, Meeting, Officials, situation, Cauvery basin