Thursday, August 13, 2026

BDA Apartments

Home Front Page ಪತ್ರಕರ್ತರು ಒತ್ತಡ ಮುಕ್ತ ಬದುಕು ನಡೆಸಿ: ಆರೋಗ್ಯ ಸ್ಥಿರತೆ ಕಾಪಾಡಿಕೊಳ್ಳಿ- ಡಾ.ಸದಾನಂದ್ ಕಿವಿಮಾತು

ಪತ್ರಕರ್ತರು ಒತ್ತಡ ಮುಕ್ತ ಬದುಕು ನಡೆಸಿ: ಆರೋಗ್ಯ ಸ್ಥಿರತೆ ಕಾಪಾಡಿಕೊಳ್ಳಿ- ಡಾ.ಸದಾನಂದ್ ಕಿವಿಮಾತು

ಮೈಸೂರು,ಜೂನ್,20,2025 (www.justkannada.in): ಪತ್ರಕರ್ತರು ಒತ್ತಡದ ಬದುಕಿಗೆ ಸಿಲುಕಿ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಪತ್ರಕರ್ತರು ಒತ್ತಡ ಮುಕ್ತ ಬದುಕು ನಡೆಸಿ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ಮುಖ್ಯಸ್ಥ ಡಾ.ಸದಾನಂದ್ ಕಿವಿಮಾತು ಹೇಳಿದರು.

ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ಇಂದು ಆಯೋಜಿಸಿದ್ದ ಪತ್ರಕರ್ತರ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಡಾ.ಸದಾನಂದ್, ಇತ್ತೀಚೆಗೆ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಪತ್ರಕರ್ತರು ಒತ್ತಡದಿಂದ ಹೃದಯ ಸಮಸ್ಯೆಗೊಳಗಾಗುತ್ತಿದ್ದಾರೆ. ಹೀಗಾಗಿ  ಮದ್ಯಪಾನ, ಧೂಮಪಾನ ತ್ಯಜಿಸಬೇಕು ಸಕ್ಕರೆ, ಉಪ್ಪಿನ ಅಂಶ ಕಡಿಮೆ ಮಾಡಬೇಕು. ಮಾನಸಿಕ ಒತ್ತಡದಿಂದ ದೂರ ಉಳಿಯಬೇಕು. ನಿತ್ಯವೂ ವಾಕಿಂಗ್, ಜಾಗಿಂಗ್ ಮಾಡುವ ಮೂಲಕ ಆರೋಗ್ಯ ಸ್ಥಿರತೆ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಈ ವೇಳೆ ಡಾ. ಪಶುಪತಿ, ಡಾ. ಶಶಿಕಾಂತ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಉಪಾಧ್ಯಕ್ಷ ರವಿಪಾಂಡವಪುರ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.vtu

Key words: health, check-up, camp, journalists, Mysore, Jayadeva Cardiology Institute