‘ಕಿಂಗ್ ಮೇಕರ್’ ಆಗುವ ಎಚ್ಡಿಕೆ ಕನಸಿಗೆ ತಣ್ಣೀರು !

ಮೈಸೂರು, ಮೇ 13, 2023 (www.justkannada.in): ‘ಕಿಂಗ್ಸ್ ಮೇಕರ್’ ಆಗಬೇಕೆಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಸೆಗೆ ರಾಜ್ಯದ ಜನ ತಣ್ಣೀರೆರೆಚಿದ್ದಾರೆ.

ಹೌದು. ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಅಂತಿಮವಾಗುತ್ತಿದ್ದು, ರಾಜ್ಯದಲ್ಲಿ ಕೈ ಅಧಿಕಾರದ ಗದ್ದುಗೆ ಏರುವುದು ಖಚಿತವಾಗುತ್ತಿದೆ. ಈ ಮೂಲಕ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೇ ಜೆಡಿಎಸ್ ಕಿಂಗ್ ಮೇಕರ್ ಆಗುತ್ತದೆ ಎಂಬ ಎಚ್ಡಿಕೆ ನಿರೀಕ್ಷೆ ಹುಸಿಯಾಗಿದೆ.

ಕರ್ನಾಟಕವು ಒಟ್ಟು 224 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್​ ಮತ್ತು ಜೆಡಿಎಸ್​ ನಡುವೆ ಪೈಪೋಟಿ ನಡೆದಿತ್ತು. ಈ ನಡುವೆ ಜೆಡಿಎಸ್ ಮತ್ತೆ ಕಿಂಗ್ ಮೇಕರ್ ಆಗುವ ಆಸೆ ಹೊಂದಿತ್ತು.

ಸದ್ಯದ ಚಿತ್ರಣದ ಪ್ರಕಾರ ಜೆಡಿಎಸ್ ಸ್ಪಷ್ಟ ಬಹುಮತ ಗಳಿಸುವುದು ನಿಚ್ಚಳವಾಗಿದೆ. ಇದರಿಂದ ರಾಜ್ಯದಲ್ಲಿ ಮತ್ತೆ ಸಿಎಂ ಆಗಬೇಕೆಂದು ಕನಸು ಕಾಣುತ್ತಿದ್ದ ಎಚ್ಡಿ ಕುಮಾರಸ್ವಾಮಿ ಅವರಿಗೆ ನಿರಾಸೆಯಾಗಿದೆ.