ಈ ಬಾರಿ ಚಾಮರಾಜನಗರ ಜಿಲ್ಲೆ ‘ಬಿಜೆಪಿ ಮುಕ್ತ’!

ಮೈಸೂರು, ಮೇ 13, 2023 (www.justkannada.in): ಈ ಬಾರಿ ಚಾಮರಾಜನಗರ ಜಿಲ್ಲೆ ಬಿಜೆಪಿ ಮುಕ್ತವಾಗಿದೆ!

ಹೌದು. ಈ ಬಾರಿ ಚಾಮರಾಜನಗರ ಜಿಲ್ಲೆಯಲ್ಲಿ ಕಮಲ ಪಕ್ಷ ಮಕಾಡೆ ಮಲಗಿದೆ.

ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಈ ಬಾರಿ ಹಿನ್ನೆಡೆ ಸಾಧಿಸಿದ್ದು, ಮಾಜಿ ಸಚಿವ ಮಹದೇವಪ್ರಸಾದ್ ಅವರ ಪುತ್ರ ಎಚ್.ಎಂ.ಗಣೇಶ್ ಪ್ರಸಾದ್ ಜಯಭೇರಿ ಬಾರಿಸುವ ಹಾದಿಯಲ್ಲಿದ್ದಾರೆ.

ಇನ್ನು ಕೊಳ್ಳೇಗಾಲದಲ್ಲಿ ಹಾಲಿ ಶಾಸಕ ಎನ್.ಮಹೇಶ್ ಹಿನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ನ ಎ.ಆರ್. ಕೃಷ್ಣಮೂರ್ತಿ ಗೆಲುವಿನ ನಗೆ ಬೀರುವುದು ಬಹುತೇಕ ಖಚಿತವಾಗಿದೆ.

ಇನ್ನು ಸಾಕಷ್ಟು ಗಮನ ಸೆಳೆದಿದ್ದ ಚಾಮರಾಜನಗ ಕ್ಷೇತ್ರದಲ್ಲಿ ಮಾಜಿ ಸಚಿವ ವಿ.ಸೋಮಣ್ಣ ಸೋಲುವ ಮೂಲಕ ಈ ಕ್ಷೇತ್ರ ಭಾರಿ ಗಮನ ಸೆಳೆದಿದೆ. ಕಾಂಗ್ರೆಸ್’ನ ಪುಟ್ಟರಂಗಶೆಟ್ಟಿ ಜಯದ ನಗೆ ಬೀರಿದ್ದಾರೆ.  ಈ ಮೂಲಕ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬಿಜೆಪಿ ತನ್ನ ನೆಲೆ ಕಳೆದುಕೊಂಡಿದೆ.