ಯಾವುದೇ ಮೆರವಣಿಗೆ, ಸಂಭ್ರಮಾಚರಣೆ ಮಾಡದಂತೆ ಕಾರ್ಯಕರ್ತರಲ್ಲಿ ಹೆಚ್.ಡಿ ರೇವಣ್ಣ ಮನವಿ.

ಬೆಂಗಳೂರು,ಮೇ,15,2024 (www.justkannada.in):  ಸಂತ್ರಸ್ತೆ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ನಿನ್ನೆಯಷ್ಟೆ ಜೈಲಿನಿಂದ ಬಿಡುಗಡೆಯಾಗಿರುವ ಶಾಸಕ ಹೆಚ್ ಡಿ ರೇವಣ್ಣ,  ಯಾವುದೇ ಮೆರವಣಿಗೆ, ಸಂಭ್ರಮಾಚರಣೆ ಮಾಡದಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಹೆಚ್.ಡಿ ರೇವಣ್ಣ,  . ಇಂದು ನಾನು ನ್ಯಾಯಾಲಯಕ್ಕೆ ತಲೆ ಭಾಗಿದ್ದೇನೆ. ಎಲ್ಲವನ್ನೂ ನ್ಯಾಯಾಲಯಕ್ಕೆ ಬಿಟ್ಟಿದ್ದೇನೆ.  ಯಾರು ಕೂಡ ಸಂಭ್ರಮಾಚರಣೆ ಮಾಡಬೇಡಿ  ಯಾವುದೇ ಮೆರವಣಿಗೆ ರ್ಯಾಲಿ ಬೇಡ ಪಟಾಕಿ ಹೊಡೆಯೋದು ಭೇಡ,   ಸಂಕಷ್ಟದಲ್ಲಿದ್ದಾಗ ಇದ್ಯಾವುದು ಬೇಡ  ಎಂದು ಮನವಿ ಮಾಡಿದ್ದಾರೆ.

ಷಡ್ಯಂತ್ರದ ಬಗ್ಗೆ ನಾನು ಏನೂ ಹೇಳುವುದಿಲ್ಲ.   ಹಾಸನ ಜಿಲ್ಲೆಯ ಜನ ಸಂಭ್ರಮ ಮಾಡುವುದು ಬೇಡ. ನಾನು ಎಲ್ಲೂ ಹೋಗುವುದಿಲ್ಲ ಎಂದು ಹೆಚ್ ಡಿ ರೇವಣ್ಣ ಹೇಳಿದ್ದಾರೆ.

Key words: HD Revanna, requested, no, celebration