ತನಿಖೆ ಚುರುಕುಗೊಳಿಸಿದ ಎಸ್ ಐಟಿ: ಬಿಜೆಪಿ ಮುಖಂಡ ದೇವರಾಜೇಗೌಡ ನಿವಾಸ ಸೇರಿ 5 ಕಡೆಗಳಲ್ಲಿ ದಾಳಿ.

ಹಾಸನ,ಮೇ,14,2024 (www.justkannada.in): ಪ್ರಜ್ವಲ್ ರೇವಣ್ಣ  ಪೆನ್ ಡ್ರೈವ್ ಹಂಚಿಕೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಎಸ್ ಐಟಿ ಅಧಿಕಾರಿಗಳು ಇದೀಗ ಹಾಸನದಲ್ಲಿ ಏಕಕಾಲಕ್ಕೆ 5 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಅವರ ಆಪ್ತರಾದ ಶರತ್ ಹಾಗೂ ಕಿರಣ್ ಒಡೆತನದ ಹೋಟೆಲ್, ಬಾರ್ ಗಳ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ಶರತ್ ನಿವಾಸದ ಮೇಲೂ ಎಸ್ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದಲ್ಲದೆ ರವಿಂದ್ರನಗರದಲ್ಲಿರುವ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡರ ನಿವಾಸದ ಮೇಲೂ ಎಸ್ ಐಟಿ ದಾಳಿ ನಡೆಸಿ ಶೋಧಕಾರ್ಯ ನಡೆಸುತ್ತಿದೆ. ಈ ಮೂಲಕ ಬಿಜೆಪಿ ಮುಖಂಡರಿಗೆ ಎಸ್ ಐಟಿ ಶಾಕ್ ನೀಡಿದೆ.

Key words: SIT, BJP leader, Devarajegowda, residence