ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ: 6 ಮಂದಿ ಸಜೀವದಹನ.

ಅಮರಾವತಿ, ಮೇ, 14,2024 (www.justkannada.in): ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬಸ್ ಹೊತ್ತಿ ಉರಿದು 6 ಮಂದಿ ಸಜೀವ ದಹನವಾಗಿರುವ ಘಟನೆ ಹೈದರಾಬಾದ್- ವಿಜಯವಾಡ ಹೆದ್ದಾರಿಯ ಚಿಲಕಲೂರಿಪೇಟೆ ಮಂಡಲದ ಬಳಿ ನಡೆದಿದೆ.

ಬಾಪಟ್ಲಾದಿಂದ ತೆಲಂಗಾಣದ ರಾಜಧಾನಿ ಹೈದರಾಬಾದ್‌ಗೆ ಹೋಗುತ್ತಿದ್ದ ಬಸ್  ಲಾರಿಗೆ ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಜೀವ ದಹನವಾಗಿದ್ದಾರೆ. ಈ ರಸ್ತೆ ಭೀಕರ ಅಪಘಾತದಲ್ಲಿ 32 ಮಂದಿ ಗಾಯಗೊಂಡಿದ್ದು, ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸ್‌ ನಲ್ಲಿರುವವರು ಬಾಪಟ್ಲದಿಂದ ಮತ ಚಲಾಯಿಸಿ  ವಾಪಸ್ ಆಗುತ್ತಿದ್ದರು ಎಂದು ಹೇಳಲಾಗಿದೆ. ರಸ್ತೆ ಅಪಘಾತದ ವೇಳೆ ಬಸ್‌ ನಲ್ಲಿ 42 ಮಂದಿ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಬಸ್ ಮತ್ತು ಟ್ರಕ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಈ ಭೀಕರ ಅಪಘಾತದಲ್ಲಿ ಟ್ರಕ್ ಮತ್ತು ಬಸ್ ಚಾಲಕ ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Key words: accident, bus,  lorry,  Death