‘ಮಿಸ್ಟರ್ ಕುಮಾರಸ್ವಾಮಿ’ ನೀನು ಗೆಲ್ಲೋದಿಲ್ಲ: ಏಕವಚನದಲ್ಲೇ ವಾಗ್ದಾಳಿ: ಬಹಿರಂಗ ಚರ್ಚೆಗೆ ಡಿ.ಕೆ ಶಿವಕುಮಾರ್ ಆಹ್ವಾನ.

ಬೆಂಗಳೂರು,ಏಪ್ರಿಲ್,15,2024 (www.justkannada.in):  ಗ್ಯಾರಂಟಿಗಳಿಂದ ಹೆಣ್ಣುಮಕ್ಕಳು ದಾರಿತಪ್ಪುತ್ತಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಡಿಸಿಎಂ ಡಿಕೆ ಶಿವಕುಮಾರ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಮಿಸ್ಟರ್ ಕುಮಾರಸ್ವಾಮಿ ಹೆದರಿ ಪಕ್ಕದ ಜಿಲ್ಲೆಗೆ ಹೋಗಿದ್ದೀಯಾ. ನೀನು ಗೆಲ್ಲುವುದಿಲ್ಲ. ನೀನು ಎಂತ ಸುಳ್ಳುಗಾರ ಮೋಸಗಾರ ಎಂದು ಗೊತ್ತಾಗುತ್ತದೆ.  ನಾನು ಕಲ್ಲು ಲೂಟಿ ಮಾಡಿದ್ನೋ   ಮೋಸಮಾಡಿದ್ನೋ ಬಹಿರಂಗ ಚರ್ಚೆಗೆ ಬರಲಿ . ದಾಖಲೆ ಸಮೇತ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

ನೀನು ಹೆಣ್ಣುಕ್ಕಳು ದಾರಿತಪ್ಪುತ್ತಾರೆ ಅಂದ್ರ ಏನರ್ಥ. ಇದನ್ನು ನಾವು ಖಂಡಿಸಬೇಕು. ನಾನು ಎಲ್ಲಾ ಮಹಿಳಾ ಸಂಘಟನೆಗೆ ಕರೆ ಕೊಡ್ತೇನೆ. ನಿಮ್ಮ ಸ್ವಾಭಿಮಾನ ಉಳಿಸಿಕೊಳ್ಳಲು ಪ್ರತಿಭಟನೆ ಮಾಡಿ ಪ್ರತಿಯೊಂದು ಜಿಲ್ಲೆಯಲ್ಲೂ ಪ್ರತಿಭಟನೆ ಮಾಡಬೇಕು  ಎಂದು ಮಹಿಳಾ ಸಂಘಟನೆಗೆ ಪ್ರತಿಭಟನೆಗೆ ಡಿಸಿಎಂ  ಡಿಕೆ ಶಿವಕುಮಾರ್ ಕರೆ ಕೊಟ್ಟರು

ಹೆಚ್ ಡಿಕೆಗೆ ಪಿಕ್ ಪಾಕೆಟ್ ಮಾಡಿ ರೂಢಿ.  ಹೀಗಾಗಿ ಗ್ಯಾರಂಟಿಗಳನ್ನ ಪಿಕ್ ಪಾಕೇಟ್ ಎಂದಿದ್ದಾರೆ ಎಂದು ಕಿಡಿಕಾರಿದರು.

Key words: HD Kumaraswamy, DCM, DK Shivakumar