ಮೋದಿ ಪ್ರಧಾನಿಯಾಗಬೇಕೆಂದು ಸೈಲೆಂಟ್ ಆಗಿದ್ದೇನೆ-ಡಿ.ವಿ ಸದಾನಂದಗೌಡ ಅಸಮಾಧಾನ.

ಚಿಕ್ಕಬಳ್ಳಾಪುರ,ಏಪ್ರಿಲ್, 15,2024 (www.justkannada.in):   ಬೆಂಗಳೂರು ಉತ್ತರ ಕ್ಷೇತ್ರದಿಂದ ತಮಗೆ ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಡಿ.ವಿ ಸದಾನಂದಗೌಡ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಡಿ.ವಿ ಸದಾನಂದಗೌಡ,  ಎಂಪಿ ಚುನಾವಣೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಆಗುತ್ತದೆ.  ನನಗೆ ಆಸೆ ಹುಟ್ಟಿಸಿ ಬಿಜೆಪಿ ಟಿಕೆಟ್ ತಪ್ಪಿಸಿದರು. ಮೊದಲು  ಬೇಡ ಅಂದ್ರು. ನಂತರ ಬಲವಂತವಾಗಿ ಆಸೆ ಹುಟ್ಟಿಸಿದರು ಟಿಕೆಟ್ ಗಾಗಿ ಕ್ಷೇತ್ರದಲ್ಲಿ ಪ್ರತಿಯೊಬ್ಬರು ನನ್ನ ಹೆಸರು ಪ್ರಸ್ತಾಪಿಸಿದ್ದರು.

ಯಾವುದೇ ಪದಾಧಿಕಾರಿ  ಬೇರೆಯವರ ಹೆಸರು ಸೂಚಿಸಿಲ್ಲ. ನನಗೆ ವ್ಯಕ್ತವಾದ ಬೆಂಬಲ ನೋಡಿ ವರಿಷ್ಟರಿಗೆ ಆಶ್ಚರ್ಯವಾಗಿತ್ತು.  ಪಕ್ಷಕ್ಕೆ ದುಡಿದ ಬೇರೆ ಕಾರ್ಯರ್ತರಿಗೆ ಜವಾವ್ದಾರಿ ನೀಡಬೇಕು.  ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಸೈಲೆಂಟ್ ಆಗಿ ಇದ್ದೇನೆ .  ನಿಸ್ವಾರ್ಥವಾಗಿ ಪಕ್ಷದಲ್ಲಿ ಸ್ವಚ್ಚತೆ ಮಾಡಬೇಕಿದೆ ಎಂದು ಡಿ.ವಿ ಸದಾನಂದಗೌಡ ತಿಳಿಸಿದ್ದಾರೆ.

Key words: DV Sadananda Gowda, silent , Modi, PM