Sunday, August 9, 2026

BDA Apartments

Home Front Page ಕೊರೊನಾ ಸೋಂಕು ಗ್ರಾಮಕ್ಕೆ ಕಾಲಿಡದಂತೆ ಗ್ರಾಮಸ್ಥರ ಸ್ವಯಂ ದಿಗ್ಬಂಧನ !

ಕೊರೊನಾ ಸೋಂಕು ಗ್ರಾಮಕ್ಕೆ ಕಾಲಿಡದಂತೆ ಗ್ರಾಮಸ್ಥರ ಸ್ವಯಂ ದಿಗ್ಬಂಧನ !

ಮೈಸೂರು, ಜುಲೈ 12, 2020 (www.justkannada.in): ಎಚ್ ಡಿ ಕೋಟೆ ತಾಲೂಕಿನಲ್ಲಿ ಕೊರೋನ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸ್ವಯಂ ದಿಗ್ಭಂದನ ವಿಧಿಸಿಕೊಂಡಿದ್ದಾರೆ.

ಎಚ್ ಡಿ ಕೋಟೆ ತಾಲೂಕಿನ ಆಲತಾಳಹುಂಡಿ ಗ್ರಾಮಕ್ಕೆ ದಿಗ್ಭಂದನ ವಿಧಿಸಿಕೊಳ್ಳಲಾಗಿದೆ. ಗ್ರಾಮದ ಒಳಗೆ ಪ್ರವೇಶಿಸುವ ರಸ್ತೆಯನ್ನು ಸ್ವತಃ ಗ್ರಾಮಸ್ಥರೇ ಬಂದ್ ಮಾಡಿದ್ದಾರೆ.

ಹೊರಭಾಗದ ಜನರು ಒಳಬರದಂತೆ ಅಡ್ಡಲಾಗಿ ವಿದ್ಯುತ್ ಕಂಬ ಇರಿಸಿ ರಸ್ತೆ ಬಂದ್ ಮಾಡಲಾಗಿದೆ. ಇತ್ತೀಚಿಗೆ ತಾಲೂಕಿನ ಹಳ್ಳಿಗಳಲ್ಲೂ ಪ್ರಕರಣ ಹೆಚ್ಚಾಗುತ್ತಿದೆ. ತಾಲೂಕಿನಾದ್ಯಂತ 28 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ತಾಲೂಕಿನ ಪ್ರತಿ ಹಳ್ಳಿಗಳ ಹೆಚ್ಚಾದ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ತಾಲೂಕಿನ ಇತರೆ ಗ್ರಾಮಗಳಲ್ಲೂ ಸ್ವಯಂ ದಿಗ್ಭಂದನ ವಿಧಿಸಿಕೊಳ್ಳಲಾಗುತ್ತಿದೆ. ವ್ಯಾಪಾರಸ್ಥರು, ಬೇರೆ ಗ್ರಾಮದ ಕೂಲಿ ಕಾರ್ಮಿಕರು ಬರದಂತೆ ಎಚ್ಚರಿಕೆ ವಹಿಸಲಾಗಿದೆ.