Home Front Page ಹೆಚ್.ಡಿ ದೇವೇಗೌಡರ ಕುಟುಂಬ ಯಾರನ್ನೂ ಬೆಳೆಯಲು ಬಿಟ್ಟಿಲ್ಲ- ಸಚಿವ ನಾರಾಯಣಗೌಡ ವಾಗ್ದಾಳಿ.

ಹೆಚ್.ಡಿ ದೇವೇಗೌಡರ ಕುಟುಂಬ ಯಾರನ್ನೂ ಬೆಳೆಯಲು ಬಿಟ್ಟಿಲ್ಲ- ಸಚಿವ ನಾರಾಯಣಗೌಡ ವಾಗ್ದಾಳಿ.

0
ಹೆಚ್.ಡಿ ದೇವೇಗೌಡರ ಕುಟುಂಬ ಯಾರನ್ನೂ ಬೆಳೆಯಲು ಬಿಟ್ಟಿಲ್ಲ- ಸಚಿವ ನಾರಾಯಣಗೌಡ ವಾಗ್ದಾಳಿ.

ಮಂಡ್ಯ,ಏಪ್ರಿಲ್,1,2023(www.justkannada.in):  ಜೆಡಿಎಸ್ ನಲ್ಲಿ ಒಬ್ಬರನ್ನ ತೆಗೆಯಲು ಮತ್ತೊಬ್ಬರನ್ನ ಹುಟ್ಟಿ ಹಾಕುತ್ತಾರೆ. ಹೆಚ್.ಡಿ ದೇವೇಗೌಡರ ಕುಟುಂಬ ಯಾರನ್ನೂ ಬೆಳೆಯಲು ಬಿಟ್ಟಿಲ್ಲ ಎಂದು  ಸಚಿವ ನಾರಾಯಣಗೌಡ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ನಾರಾಯಣಗೌಡ, ಜೆಡಿಎಸ್ ನಲ್ಲಿ  ಒಬ್ಬರನ್ನ ತೆಗೆಯಲು ಮತ್ತೊಬ್ಬರನ್ನ ಹುಟ್ಟು ಹಾಕುತ್ತಾರೆ. ಕೃಷ್ಣಗೆ ಟಿಕೆಟ್ ತಪ್ಪಿಸಲು ನನಗೆ ಟಿಕೆಟ್ ಕೊಟ್ಟರು. ನಾನು ಅಂದು ಪಾರ್ಟಿಗೆ ಏನು ಮಾಡಿರಲಿಲ್ಲ. ಸ್ಪೀಕರ್ ಕೃಷ್ಣ 40 ವರ್ಷ ಸೇವೆ ಮಾಡಿದ್ದರು. ಸ್ಪೀಕರ್ ಕೃಷ್ಣ ಮುಗಿಸಲು ನನಗೆ ಟಿಕೆಟ್ ನೀಡಿದ್ರು. ನನ್ನ ಮುಗಿಸಲು ಇನ್ನೊಬ್ಬರನ್ನ ಹುಟ್ಟಿಹಾಕಿದ್ರು.

ಹೀಗೆ  ಒಬ್ಬರನ್ನ ತೆಗೆಯಲು ಮತ್ತೊಬ್ಬರನ್ನು ಹುಟ್ಟು ಹಾಕ್ತಾರೆ. ನಾನು ಟೀಕೆ ಮಾಡಲ್ಲ. ನೋವನ್ನ  ಹೇಳಿಕೊಳ್ಳುತ್ತಿದ್ದೇನೆ ಹೆಚ್.ಡಿಕುಟುಂಬ  ಯಾರನ್ನೂ ಬೆಳೆಯಲು ಬಿಟ್ಟಿಲ್ಲ ಎಂದು ಕಿಡಿಕಾರಿದರು.

Key words: HD Devegowda- family –  Minister -Narayana Gowda