ಹಾಸನ ಗಣೇಶ ಮೆರವಣಿಗೆ ಟ್ರಕ್ ಅಪಘಾತ: ಚಾಲಕನ ವಿರುದ್ದ FIR ದಾಖಲು

ಹಾಸನ,ಸೆಪ್ಟಂಬರ್,13,2025 (www.justkannada.in):  ಹಾಸನ ತಾಲ್ಲೂಕು ಮೊಸಳೆಹೊಸಳ್ಳಿ ಬಳಿ ಗಣಪತಿ ಮೆರವಣಿಗೆ  ವೇಳೆ ಟ್ರಕ್ ಹರಿದು 9 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಕ್ ಚಾಲಕನ ವಿರುದ್ದ ಎಫ್ ಐಆರ್ ದಾಖಲಾಗಿದೆ.

ಮೃತ ಈಶ್ವರ್ ಚಿಕ್ಕಪ್ಪ ಮಂಜೇಗೌಡ ನೀಡಿದ ದೂರು ಆಧರಿಸಿ ಗೊರೂರು ಪೊಲೀಸ್ ಠಾಣೆಯಲ್ಲಿ ಟ್ರಕ್ ಚಾಲಕ ಭುವನ್ ವಿರುದ್ದ ಎಫ್ ಐಆರ್ ದಾಖಲಾಗಿದೆ.  ಅಪಘಾತ ನಡೆಯುತ್ತಿದ್ದಂತೆ ಚಾಲಕ ಭುವನ್  ಮೇಲೆ ಹಲ್ಲೆ ಮಾಡಲಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದು ಎಲ್ಲರೂ 25 ವರ್ಷದ ಒಳಗಿನವರು ಎನ್ನಲಾಗುತ್ತಿದೆ. ದುರಂತದಲ್ಲಿ ಮೃತಪಟ್ಟವರಿಗೆ  ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Key words: Hassan, truck, accident, FIR, driver