Tuesday, August 4, 2026

BDA Apartments

Home Front Page ಪರ್ಸೆಂಟೇಜ್ ನೀಡುವಂತೆ ಪಿಡಿಒಗಳಿಗೆ ಕಿರುಕುಳ ಆರೋಪ: ಶ್ರೀರಂಗಪಟ್ಟಣ ಇಒ ಅಮಾನತು.

ಪರ್ಸೆಂಟೇಜ್ ನೀಡುವಂತೆ ಪಿಡಿಒಗಳಿಗೆ ಕಿರುಕುಳ ಆರೋಪ: ಶ್ರೀರಂಗಪಟ್ಟಣ ಇಒ ಅಮಾನತು.

ಮಂಡ್ಯ,ಫೆಬ್ರವರಿ,3,2022(www.justkannada.in): ಪರ್ಸೆಂಟೇಜ್ ನೀಡುವಂತೆ ಪಿಡಿಒಗಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಶ್ರೀರಂಗಪಟ್ಟಣದ ಇಒ ಭೈರಪ್ಪರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ರ್ಸೆಂಟೇಜ್ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾರ್ಯನಿರ್ವಾಹಕ ಅಧಿಕಾರಿ ಭೈರಪ್ಪ ವಿರುದ್ಧ ಶ್ರೀರಂಗಪಟ್ಟಣ ತಾಲೂಕಿನ ಪಿಡಿಒಗಳು ಆರೋಪ ಮಾಡಿದ್ದರು.ಇಒ ಭೈರಪ್ಪ ವಿರುದ್ಧ ಜಿ.ಪಂ. ಸಿಇಒಗೆ ಪಿಡಿಒಗಳಿಂದ ದೂರು ಸಲ್ಲಿಸಲಾಗಿದೆ. ಕಾಮಗಾರಿಗಳ ಬಿಲ್ ಮಂಜೂರು ಮಾಡಲು ಶೇಕಡಾ 30ರಷ್ಟು ಪರ್ಸೆಂಟೇಜ್ ಕೇಳುತ್ತಾರೆಂದು ಪಿಡಿಒಗಳು ಆರೋಪ ಮಾಡಿದ್ದರು ಎನ್ನಲಾಗಿದೆ.

ಇ-ಸ್ವತ್ತು ಮಾಡಿಸುವವರಿಂದ ಹಣ ಪಡೆದು ನನಗೆ ನೀಡಿ ಎಂದು ಪಿಡಿಒಗಳ ಬಳಿ ಪರ್ಸೆಂಟೇಜ್ ಕೇಳುತ್ತಾರೆ. ನೇರವಾಗಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಾರೆ. ಕೇಳಿದಷ್ಟು ಪರ್ಸೆಂಟೇಜ್ ನೀಡಲೇಬೇಕೆಂದು ಕಿರುಕುಳ ಮಾಡುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಇಒ ಕಿರುಕುಳಕ್ಕೆ ಬೇಸತ್ತು ಇಒ ಪರ್ಸೆಂಟೇಜ್ ಕೇಳುವ ಆಡಿಯೋ, ವಿಡಿಯೋವನ್ನು ವೈರಲ್ ಆಗಿತ್ತು.

ಇದೀಗ ಶ್ರೀರಂಗಪಟ್ಟಣ ಇಒ ಭೈರಪ್ಪರನ್ನ ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

 

Key words: Harassment – PDOs-EO -suspension