ನಾನು ಹಗರಣ ಮಾಡಿದ್ದರೇ ಸಾರ್ವಜನಿಕವಾಗಿ ನೇಣಿಗೆ ಹಾಕಿ- ಸಿದ್ಧರಾಮಯ್ಯಗೆ ಸಚಿವ ಸುಧಾಕರ್ ತಿರುಗೇಟು.

ಚಿಕ್ಕಬಳ್ಳಾಪುರ,ಜನವರಿ,25,2023(www.justkannada.in):  ಕೊರೋನಾ ವೇಳೆ 3 ಸಾವಿರ ಕೋಟಿ ರೂ. ಲಂಚ ಪಡೆದಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಸುಧಾಕರ್,  ನಾನು ಹಗರಣ ಮಾಡಿದ್ದರೇ ನೇಣಿಗೆ ಹಾಕಿ. ಪಿನ್ ಟು ಪಿನ್ ಲೆಕ್ಕ ಕೊಡುತ್ತೇನೆ.  ಹಗರಣ ಆಗಿದ್ರೆ ಸಾರ್ವಜನಿಕವಾಗಿ ನನ್ನನ್ನ ನೇಣಿಗೆ ಹಾಕಿ ಎಂದು ಕಿಡಿಕಾರಿದರು.

ನಾನು ಮೂರು ಬಾರಿ ಗೆದ್ದಿದ್ದೀನಿ. ಜನರ ಮೇಲೆ ನಂಬಿಕೆ ಇಟ್ಟಿದ್ದಿನಿ.  ಚಿಕ್ಕಬಳ್ಳಾಪುರದಲ್ಲಿ ನನ್ನನ್ನ ಸೋಲಿಸುತ್ತೀವಿ ಅಂತಿದ್ದಾರೆ. ನಾನು ಒಳ್ಳೆಯ ಬ್ಯಾಟ್ಸಮನ್ ಸಣ್ಣಮಗು ಅಲ್ಲ ಹೇಗೆ ಬೌಲಿಂಗ್ ಎದರಿಸಬೇಕು ಎಂದು ಗೊತ್ತಿದೆ ಎಂದು ಸುಧಾಕರ್ ಟಾಂಗ್ ನೀಡಿದರು.

ನಾನು ಬಿಜೆಪಿಗೆ ಹೋಗಿದ್ದು ಸಿದ್ಧರಾಮಯ್ಯಗೆ ಗೊತ್ತು. ಜೆಡಿಎಸ್ ಜೊತೆ ಅನೈತಿಕ ಸಂಬಂಧಕ್ಕೆ ಬೇಸತ್ತಿದ್ದವು. ಹಾಗಾಗಿ ಹೋಗಿದ್ದವು. ಹಣಕ್ಕಾಗಿ ಬಿಜೆಪಿಗೆ ಹೋಗಿಲ್ಲ ಅಂತ ಗೊತ್ತು. ನಾವು ಸಿದ್ಧರಾಮಯ್ಯರಷ್ಟು ಬುದ್ಧಿವಂತರಲ್ಲ ನಾವು  ಅಷ್ಟೋ ಇಷ್ಟೋ ಬುದ್ದಿವಂತರಿದ್ದೀವಿ. ಇಡೀ ಜೀವನ ಕಾಂಗ್ರೆಸ್ ಬೈದುಕೊಂಡು ಬಂದರು ಆದರೆ ಅವರೇ ಏಕೆ ಕಾಂಗ್ರೆಸ್ ಸೇರಿದರು ಎಂದು ಸಚಿವ ಸುಧಾಕರ್ ಪ್ರಶ್ನಿಸಿದರು.

Key words: Hang me –publicly- if –  scandal-Minister- Sudhakar