ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಬಿಜೆಪಿ ಅಕ್ರಮದಲ್ಲೂ ನಿಮ್ಮ ಪ್ರಮುಖ ಪಾತ್ರವಿದೆ-ಸಿದ‍್ಧರಾಮಯ್ಯಗೆ ಹೆಚ್.ಡಿಕೆ ಟಾಂಗ್

ರಾಯಚೂರು,ಜನವರಿ,25,2023(www.justkannada.in):  ಇಂದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್ ಕಾರಣ. ಜೆಡಿಎಸ್ ಗೂ ಬಿಜೆಪಿಗೂ ವ್ಯತ್ಯಾಸವಿಲ್ಲ ಎಂದು ಟೀಕಿಸಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನಿಮ್ಮ ಹಿಂದಿರುವವರು ಏನು ಮಾಡಿದ್ರು ಅಂತಾ ಗೊತ್ತಿದೆ. ದರೋಡೆ ಮಾಡಲು 5 ವರ್ಷ ಅವಕಾಶ ನೀಡಿದ್ರಿ.  ಯಾರನ್ನ ಹೇಗೆ ಉಪಯೋಗ ಮಾಡಿಕೊಂಡ್ರಿ ಎಲ್ಲವೂ ಗೊತ್ತಿದೆ. ನಮ್ಮ ಪಕ್ಷದ ಬಗ್ಗೆ ಚರ್ಚಿಸಲು ನೈತಿಕತೆ ನಿಮಗೆ ಇಲ್ಲ. ನೀವು ಚಂಬಲ್ ಕಣಿವೆ ದರೋಡೆಕೋರರು. ಬಿಜೆಪಿ ಅಕ್ರಮದಲ್ಲೂ ನಿಮ್ಮ ಪ್ರಮುಖ ಪಾತ್ರವಿದೆ. ಇಂಥ ಸರ್ಕಾರ ಬರಲು ಕಾಂಗ್ರೆಸ್ ಕಾರಣ. ಮಲ್ಲಿಕಾರ್ಜುನ ಖರ್ಗೆ. ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದೇನೆ. ಈವರೆಗೂ ನನಗೆ ಅವರಿಂದ ಉತ್ತರ ಬಂದಿಲ್ಲ. ನಿಮಗೆ  ಬಿಎಸ್ ವೈರಿಂದ ಎಷ್ಟು ಕೋಟಿ ಸಂದಾಯವಾಗಿದೆ ಹೇಳಿ..?  ಎಂದು ಟಾಂಗ್ ನೀಡಿದರು.

ಇನ್ನು ರಾಜ್ಯಕ್ಕೆ ಪದೇ ಪದೇ ಪ್ರಧಾನಿ ಮೋದಿ ಆಗಮನ ವಿಚಾರ ಕುರಿತು ಟೀಕಿಸಿದ ಹೆಚ್.ಡಿಕೆ, ಇನ್ನೂ ಬಹಳ ಸಲ ಮೋದಿ ರಾಜ್ಯಕ್ಕೆ ಬರುತ್ತಾರೆ ಗಟಾರ್ ಕ್ಲೀನ್ ಗೂ ಮೋದಿ ಅವರನ್ನ ಕರೆಸುತ್ತಾರೆ. ಜನರು ತಯಾರಾಗಬೇಕು ಎಂದು ಲೇವಡಿ ಮಾಡಿದರು.

Key words:  no morality- talk – party-HD Kumarswamy- Tong –siddaramaiah