ಪಿಎಸ್ ಐ ಹಗರಣದಲ್ಲಿ 76 ಲಕ್ಷ ರೂ. ವಸೂಲಿ: ಸರ್ಕಾರದ ಎಲ್ಲರೂ ಶಾಮಿಲು- ಡಿ.ಕೆ ಶಿವಕುಮಾರ್ ಆರೋಪ.

ಬೆಂಗಳೂರು,ಜನವರಿ,25,2023(www.justkannada.in): ಪಿಎಸ್ ಐ ಹಗರಣದಲ್ಲಿ ಆರೋಪಿಗಳಿಂದ  76 ಲಕ್ಷ ರೂ. ವಸೂಲಿ ಆಗಿದೆ. ಇದರಲ್ಲಿ ಸರ್ಕಾರದ ಎಲ್ಲರೂ ಶಾಮಿಲಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪ ಮಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್,  ಇಂದು ರಾಷ್ಟ್ರೀಯ ಮತದಾರರ ದಿನ. ಹಾಗಾಗಿ ಇಂದು  ದೂರು ನೀಡುತ್ತಿದ್ದೇವೆ. ಬಿಜೆಪಿ ಅಕ್ರಮ ತಡೆಗಟ್ಟಬೇಕು. ನಾಳೆ ಮೀಟಿಂಗ್ ಇಟ್ಟುಕೊಂಡಿದ್ದೇವೆ. ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತಕ್ಕೆ ನಾವು ದೂರು ನೀಡಿದ್ದೇವೆ. ಮಾಗಡಿಯಲ್ಲಿ ಮಂತ್ರಿ ಕಡೆಯಿಂದ ದುಡ್ಡು ಕೊಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಚಿವ ಅಶ್ವಥ್ ನಾರಾಯಣ್ ಹೆಸರು ಪ್ರಸ್ತಾಪಿಸಿದರು. ಹಾಗೆಯೇ ಪಿಎಸ್ ಐ ಹಗರಣ ಕೂಡ ತನಿಖೆಯಾಗಬೇಕು ಎಂದು ಡಿಕೆಶಿ ಒತ್ತಾಯ ಮಾಡಿದರು.

ಇನ್ನು ಸಿಡಿ ಕೇಸ್ ನಲ್ಲಿ ತಮ್ಮ ಕೈವಾಡವಿದೆ ಎಂಬ ಆರೋಪ ಮಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷವನ್ನ ಹಾಳು ಮಾಡಿದ್ದೇ ರಮೇಶ್ ಜಾರಕಿಹೊಳಿ. ಅಪರೇಷನ್ ಕಮಲ ಮಾಡಿ ಕಾಂಗ್ರೆಸ್ ಸರ್ಕಾರ ಬೀಳಿಸುದ್ನಲ್ಲ ಅವನು ಅದೇನೋ ತನಿಖೆ ಮಾಡಿಸುತ್ತೇನೆ ಎಂದಿದ್ದಾನೆ, ಮಾಡಿಸಲಿ ಸಿಬಿಐ ತನಿಖೆ ಮಾಡಿಸುವುದಕ್ಕೆ ಹೇಳಿ ಎಂದು ಟಾಂಗ್ ನೀಡಿದರು.

Key words: 76 lakhs – PSI-scam- -government – involved – D.K Shivakumar-allegation.