ಕರ್ನಾಟಕದಲ್ಲಿ ಮೋದಿ ಅವರ ಆಟ ನಡೆಯಲ್ಲ- ಗುಜರಾತ್ ಫಲಿತಾಂಶ ಕುರಿತು  ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ.

ಕಲ್ಬುರ್ಗಿ,ಡಿಸೆಂಬರ್,8,2022(www.justkannada.in): ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶ ಕರ್ನಾಟಕದ ಮೇಲೆ ಪ್ರಭಾವ ಬೀರುತ್ತೆ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಕರ್ನಾಟಕದಲ್ಲಿ ಮೋದಿ ಆಟ ನಡೆಯಲ್ಲ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕರ್ನಾಟಕ ಪ್ರಗತಿಪರ ಚಿಂತನೆಯ ರಾಜ್ಯ ಇಲ್ಲಿ ಮೋದಿ ಅವರ ಆಟ ನಡೆಯುವುದಿಲ್ಲ. ಅವರ ಆಟ ನಡೆಯುವುದಿಲ್ಲ ಎಂದು ಅರಿತುಕೊಂಡಿದ್ದರಿಂದಲೇ ಯಡಿಯೂರಪ್ಪನವರನ್ನ ಪಾರ್ಲಿಮೆಂಟರಿ ಬೋರ್ಡ್ ಗೆ ತರಲಾಗಿದೆ. ಬಿಎಸ್ ವೈಗೆ ಸ್ಥಾನಮಾನ ನೀಡಿದ್ದಾರೆ.  ಬಿಜೆಪಿಗರ ಜಟ್ಕಾಕಟ್ ಹಾಗೂ ಹಲಾಲ್ ಕಟ್ ಗಳಿಗೆ ರಾಜ್ಯದಲ್ಲಿ ಸ್ಪಂದನೆ ಸಿಕ್ಕಿಲ್ಲ ಎಂದರು.

ನಮಗೆ ಗುಜರಾತ್‍ ನಲ್ಲಿ 80 ರಿಂದ 95 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ನಮ್ಮ ನಿರೀಕ್ಷೆಗಿಂತ ಕಡಿಮೆ ಸ್ಥಾನ ಬಂದಿವೆ. ಈ ಕುರಿತು ಪರಾಮರ್ಶೆ ಮಾಡಲಾಗುವುದು. ಅಲ್ಲಿ ಮೂರು ‘ತ್ರಿ’ ಗಳು ಚೆನ್ನಾಗಿ ಕೆಲಸ ಮಾಡಿವೆ. ಅವುಗಳಿಂದಲೇ ಬಿಜೆಪಿ ಗೆಲುವು ಸಾಧಿಸಿದೆ. ಆ ಮೂರು ತ್ರಿ ಗಳೆಂದರೆ, ಮೋದಿ, ಮನಿ ಹಾಗೂ ಮಸಲ್ ಪವರ್ ಗಳು  ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.

Key words:  Gujarat-election-PM –Modi-congress-MLA-Priyank kharge