ದೇಶಾದ್ಯಂತ ಗೌರಿ- ಗಣೇಶ ಹಬ್ಬದ ಸಂಭ್ರಮ: ವಿಘ್ನ ನಿವಾರಕನಿಗೆ ವಿಶೇಷ ಪೂಜೆ

ಇಂದು ದೇಶಾದ್ಯಂತ ಗೌರಿ- ಗಣೇಶ ಹಬ್ಬದ ಸಂಭ್ರಮ ಮನೆಮಾಡಿದೆ.

ಸೆಪ್ಟೆಂಬರ್‌ನಿಂದ ಭಾದ್ರಪದ ಮಾಸ ಆರಂಭವಾಗಿದೆ. ಭಾದ್ರಪದ ಮಾಸದ ಶುಕ್ಲಪಕ್ಷದ ನಾಲ್ಕನೇ ದಿನದಂದು ವಿನಾಯಕ ಚತುರ್ದಶಿ ಹಬ್ಬವನ್ನು ಆಚರಿಸಲಾಗುತ್ತದೆ.

ವಿನಾಯಕ ಚತುರ್ಥಿಯಂದು ಗರಿಕೆ ಹುಲ್ಲಿನಿಂದ ಪೂಜೆ ಮಾಡಿದರೆ ಒಳ್ಳೆಯದು ಎಂಬ ನಂಬಿಕೆ ಇದೆ. ಗರಿಕೆ ಗಣೇಶನಿಗೆ ತುಂಬಾ ಪ್ರಿಯ. ಗರಿಕೆ, ಕಡುಬು, ಮೋದಕ ಸೇರಿದಂತೆ ನಾನಾ ಬಗೆಯ ತಿಂಡಿಗಳ‍ನ್ನು ನೈವೇದ್ಯ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ.

ಗಣಪತಿಯ ಆಶೀರ್ವಾದವೊಂದಿದ್ದರೆ ಎಲ್ಲಾ ಕೆಲಸ ಕಾರ್ಯಗಳು ನಿರ್ವಿಘನ್ವಾಗಿ ನೆರವೇರುತ್ತವೆ. ಇಂತಹ ದಿನ ಮತ್ತಷ್ಟು ಶ್ರದ್ದೆ ಭಕ್ತಯಿಂದ ಗಣಪನನ್ನು ಪೂಜಿಸಿದರೆ, ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ ಎಂಬ ಪ್ರತೀತಿ ಇದೆ. ಹೀಗಾಗಿ ಎಲ್ಲೆಡೆ ಶ್ರದ್ಧಾಭಕ್ತಿಯಿಂದ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದೆ.