Sunday, September 13, 2026

BDA Apartments

ಜಿಮ್’ಗಳಿಗೆ ಶೀಘ್ರ ಮಾರ್ಗಸೂಚಿ: ಅಪ್ಪು ಘಟನೆ ಬಳಿಕೆ ಎಚ್ಚೆತ್ತ ಸರಕಾರ BDA JK_Adv BDA Adv
Home Cinema ಜಿಮ್’ಗಳಿಗೆ ಶೀಘ್ರ ಮಾರ್ಗಸೂಚಿ: ಅಪ್ಪು ಘಟನೆ ಬಳಿಕೆ ಎಚ್ಚೆತ್ತ ಸರಕಾರ

ಜಿಮ್’ಗಳಿಗೆ ಶೀಘ್ರ ಮಾರ್ಗಸೂಚಿ: ಅಪ್ಪು ಘಟನೆ ಬಳಿಕೆ ಎಚ್ಚೆತ್ತ ಸರಕಾರ

ಬೆಂಗಳೂರು, ನವೆಂಬರ್ 1, 2021 (www.justkannada.in): ಜಿಮ್’ಗಳಿಗೆ ಮಾರ್ಗಸೂಚಿ ತರುವ ಬಗ್ಗೆ ಚರ್ಚೆ ನಡೆದಿದ್ದು, ಶೀಘ್ರವೇ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಖ್ಯಾತ ಹೃದಯ ತಜ್ಞರಿಂದ ಜಿಮ್ ಮತ್ತು ಫಿಟ್ನೆಸ್ ಸೆಂಟರ್ ಗಳಲ್ಲಿ ಮಾರ್ಗಸೂಚಿ ತರುವ ಕುರಿತು ಚರ್ಚೆ ನಡೆದಿದ್ದು, ಶೀಘ್ರವೇ ಗೈಡ್ ಲೈನ್ಸ್ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಒಂದೆರಡು ಘಟನೆಗಳನ್ನು ಆಧರಿಸಿ ಜಿಮ್ ಮಾಡುವುದೇ ತಪ್ಪು ಎಂದು ಹೇಳುವುದು ಸರಿಯಲ್ಲ. ಹೀಗಾಗಿ ಮಾರ್ಗಸೂಚಿ ತರಲು ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.

ಖ್ಯಾತ ಹೃದಯ ತಜ್ಞರಾದ ಡಾ.ಸಿ.ಎನ್. ಮಂಜುನಾಥ್, ಡಾ. ವಿವೇಕ್ ಚೌಳಿ, ಡಾ. ದೇವಿಶೆಟ್ಟಿ, ಅಮೆರಿಕದ ರಂಗಧಾಮ್ ಅವರ ಬಳಿ ಚರ್ಚೆ ನಡೆಸಲಾಗಿದ್ದು, ಶೀಘ್ರವೇ ಮಾರ್ಗಸೂಚಿ ತರಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.