ಬಕ್ರೀದ್ ಹಬ್ಬ ಸಮೀಪಿಸಿದರೂ ಇನ್ನೂ ಮಾರಾಟವಾಗದ ಮೇಕೆ-ಕುರಿಗಳು

ಬೆಂಗಳೂರು:ಆ-9:(www.justkannada.in) ಮುಸ್ಲೀಂ ಸಮುದಾಯದ ಪವಿತ್ರ ಹಬ್ಬ ಬಕ್ರೀದ್ ಸಮೀಪಿಸುತ್ತಿದ್ದರೂ ಈಬಾರಿ ಮೇಕೆಗಳ ಮಾರಾಟ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇಷ್ಟು ವರ್ಷ ಹಾಟ್ ಕೇಕ್ ನಂತೆ ಮಾರಾಟವಾಗುತ್ತಿದ್ದ ಮೇಕೆಗಳು ಈ ಭಾರಿ ಕಡಿಮೆಯಾಗಿವೆ.

ಚಮರಾಜ್‌ಪೇಟೆಯ ಈದ್ಗಾ ಮೈದಾನ, ಮಾಗಡಿ ರಸ್ತೆ, ತಿಲಕ್‌ ನಗರ, ಟ್ಯಾನರಿ ರಸ್ತೆ ಜಂಕ್ಷನ್ ಮತ್ತು ಜಯಮಹಲ್ ರಸ್ತೆಯ ಟಿವಿ ಟವರ್ ಎದುರು ಗೋಟ್ ಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆಯಾದರೂ ಈ ವರ್ಷ ಕೇವಲ 20 ಪ್ರತಿಶತದಷ್ಟು ಮಾತ್ರ ಮಾರಾಟ ದಾಖಲಾಗಿದೆ. ಕಳೆದ ವರ್ಷ, ಈ ಹೊತ್ತಿಗೆ (ಈದ್‌ಗೆ 2-3 ದಿನಗಳ ಮೊದಲು) ಶೇ 70-80 ರಷ್ಟು ಪ್ರತಿಶತ ಮೇಕೆಗಳು ಮಾರಾಟವಾಗಿದ್ದವು. ಅದು ಕೂಡ ದುಬಾರಿ ಪ್ರಭೇದಗಳ ಮೇಕೆಗಳು ಮಾರಾಟವಾಗಿದವು. ಆದರೆ ಈ ಬಾರಿ ಅಗ್ಗದ ಪ್ರಬೇದದ ತಳಿಗಳು ಕೂಡ ಮಾರಾಟ ಕಂಡಿಲ್ಲ ಎಂದು ಐ ಮಾನಿಟರಿ ಅಡ್ವೈಸರಿ ಸಂಸ್ಥಾಪಕ ಮನ್ಸೂರ್ ಖಾನ್ ತಿಳಿಸಿದ್ದಾರೆ.

ಖರೀದಿಗಳನ್ನು ಬಿಡಿ, ಜೈಪುರದಿಂದ ಬಂದಿರುವ ಅತಿ ಹೆಚ್ಚಿನ ಬೆಲೆಯ ವಿಶೇಷವಾದ ತಳಿಗಳತ್ತ ಕೂಡ ಯಾರೂ ನೋಡುತ್ತಿಲ್ಲ. ಕಂದು ಬಣ್ಣದ ಈ ಸುಂದರ ಮೇಕೆಗಳು 100 ಕಿಲೋಗಳಿಗಿಂತ ಹೆಚ್ಚು ತೂಕವಿರುತ್ತದೆ ಹಾಗೂ ಶ್ರೀಮಂತರು ಮತ್ತು ಖ್ಯಾತನಾಮರು ಇದಕ್ಕೆ ಹೆಚ್ಚು ಬೇಡಿಕೆಯಿಡುತ್ತಾರೆ. ರಾಜಸ್ಥಾನದಲ್ಲಿ ಬೆಳೆಸುವ ಸಿರೋಹಿ ಮತ್ತು ಸೊಜತ್ ಪ್ರಭೇದಗಳು 75,000 ಮತ್ತು ಅದಕ್ಕಿಂತ ಹೆಚ್ಚಿನ ರೂ ಗಳಿಗೆ ಮಾರಾಟವಾಗುವ ತಳಿಗಳತ್ತ ಕೂಡ ಈ ಬಾರಿ ಯಾರೂ ಗಮನಹರಿಸುತ್ತಿಲ್ಲ.

ಮುಬಾರಕ್ ಎಂಬುವವರು ಹೇಳುವ ಪ್ರಕಾರ, “ಪ್ರತಿ ವರ್ಷ ನಾನು ರಾಜಸ್ಥಾನದಿಂದ ಸಂಗ್ರಹಿಸುವ 500 ಕ್ಕೂ ಹೆಚ್ಚು ಕುರಿ ಮತ್ತು ಮೇಕೆಗಳನ್ನು ಮಾರುತ್ತೇನೆ. ಈದ್‌ಗೆ ಕೇವಲ ಮೂರು ದಿನಗಳು ಮಾತ್ರ ಇರುವ ಈ ವರ್ಷ, ನಾನು ಕೇವಲ 40 ಮೇಕೆ ಹಾಗೂ ಕುರಿಗಳನ್ನು ಮಾತ್ರ ಮಾರಾಟ ಮಾಡಲು ಸಾಧ್ಯವಾಗಿದೆ. ಅದೂ ಕೂಡ ಭಾರೀ ರಿಯಾಯಿತಿಯನ್ನು ನೀಡಿದ ಬಳಿಕ ಎಂದು ತಿಳಿಸಿದ್ದಾರೆ.

ಬಕ್ರೀದ್ ಹಬ್ಬ ಸಮೀಪಿಸಿದರೂ ಇನ್ನೂ ಮಾರಾಟವಾಗದ ಮೇಕೆ-ಕುರಿಗಳು

Guess why goats are not selling like hot cakes this year