ಮಯೂರಿ ಚಿತ್ರದ ಟೈಟಲ್ ಹೇಳಿದರೆ ಐದು ಲಕ್ಷ ರೂ. ಬಹುಮಾನ !

0
1123

ಬೆಂಗಳೂರು, ಮೇ 28, 2019 (www.justkannada.in): ಅಸೋಸಿಯೇಟ್‌ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ನಟರಾಜ್‌ ಮೊದಲ ಬಾರಿಗೆ ಒಂದು ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ.

ಇದು ಜೂನ್‌ 15 ರಿಂದ ಚಿತ್ರೀಕರಣಕ್ಕೆ ಹೊರಡಲಿದೆ. ಇಲ್ಲಿ ಮಯೂರಿ ಹೊರತಾಗಿ ಬಹುತೇಕರು ಹೊಸಬರೇ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಚಿತ್ರದ ಕತೆ ಹಾಗೂ ಪಾತ್ರದ ಕಾರಣಕ್ಕೆ ಮಯೂರಿ ಒಪ್ಪಿಕೊಂಡಿದ್ದಾರೆ.

ಈ ಚಿತ್ರದಲ್ಲಿ ನಾನು ಬ್ಲೈಂಡ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಟರಾಜ್‌ ಅವರು ತುಂಬಾ ಚೆನ್ನಾಗಿ ಕತೆ ಮಾಡಿಕೊಂಡಿದ್ದಾರೆ.

ಇನ್ನು ಮೌನೇಶ್ ಗೌಡ ನಿರ್ದೇಶಿಸುತ್ತಿರುವ ಮಯೂರಿ ನಟಿಸುತ್ತಿರುವ ಹೊಸ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಜತೆಗೆ ಚಿತ್ರ ತಂಡ ಹೊಸ ಘೋಷಣೆ ಮಾಡಿದೆ. ಚಿತ್ರದ ಟೈಟಲ್ ಹೇಳಿದವರಿಗೆ ಐದು ಲಕ್ಷ ರೂ. ಬಹುಮಾನ ಕೊಡುವುದಾಗಿ ಘೋಷಿಸಿದೆ.