Wednesday, August 12, 2026

BDA Apartments

Home Cinema ಸ್ಯಾಂಡಲ್’ವುಡ್ ಗೆ ಎಂಟ್ರಿ ಕೊಡಲು ಕಣ್ಸನ್ನೆ ಬೆಡಗಿ ಪ್ರಿಯಾ ಸಜ್ಜು !

ಸ್ಯಾಂಡಲ್’ವುಡ್ ಗೆ ಎಂಟ್ರಿ ಕೊಡಲು ಕಣ್ಸನ್ನೆ ಬೆಡಗಿ ಪ್ರಿಯಾ ಸಜ್ಜು !

ಬೆಂಗಳೂರು, ಮೇ 28, 2019 (www.justkannada.in): ಕಣ್ಸನ್ನೆ ಮೂಲಕ ರಾತ್ರೊ ರಾತ್ರಿ ಸ್ಟಾರ್ ಮಲಯಾಳಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕನ್ನಡಕ್ಕೆ ಬರುವ ಮುನ್ಸೂಚನೆ ನೀಡಿದ್ದಾರೆ.

ಆಡಾರ್ ಲವ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರಿಯಾ ಮೊದಲ ಸಿನಿಮಾದಲ್ಲೆ ಸೆನ್ಸೆಷನ್ ಸೃಷ್ಟಿಸಿದವರು. ಸಿನಿಮಾ ಹೇಳುವಷ್ಟು ಮಟ್ಟಕ್ಕೆ ಸಕ್ಸಸ್ ಕಾಣದಿದ್ರು ಪ್ರಿಯಾ ಮಾತ್ರ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ರು.

ಬಾಲಿವುಡ್ ನತ್ತಲೂ ಮುಖಮಾಡಿರುವ ಪ್ರಿಯಾ ಲಕ್ ಎಲ್ಲೆಡೆ ಕೈ ಹಿಡಿಯುತ್ತಿದೆ. ಇದೀಗ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಸಂಭಾಷಣೆಕಾರ ರಘು ಕೋವಿ, ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದು, ಇವರು ಕನ್ನಡಕ್ಕೆ ಪ್ರಿಯಾ ವಾರಿಯರ್ ಅವರನ್ನು ಕರೆತರುವ ಪ್ರಯತ್ನದಲ್ಲಿದ್ದಾರೆ. ಇದಕ್ಕಾಗಿ ಪ್ರಯತ್ನವನ್ನು ನಡೆಸಿದ್ದು, ಅವರು ಗ್ರೀನ್ ಸಿಗ್ನಲ್ ನೀಡುವುದಷ್ಟೇ ಬಾಕಿ ಇದೆ.