ಅನುಷ್ಕಾ ಶರ್ಮಾ ಗರ್ಭಿಣಿ, ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ !

ಮುಂಬೈ, ಮೇ 28, 2019 (www.justkannada.in): ನಟಿ, ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಗರ್ಭಿಣಿ ಎಂಬ ಸುದ್ದಿ ಹಬ್ಬಿದೆ.

ಇದಕ್ಕೆ ಕಾರಣ ಅವರು ಧರಿಸಿದ್ದ ಉಡುಪು ಹಾಗೂ ಫೋಟೋಗಳು. ಇತ್ತೀಚೆಗೆ ಅನುಷ್ಕಾ ಸಡಿಲವಾದ ಉಡುಪು ಧರಿಸಿ ಆಸ್ಪತ್ರೆ ಬಳಿ ಕಾಣಿಸಿಕೊಂಡಿದ್ದರು.

ಈ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದೇ ತಡ, ಅವರು ಗರ್ಭಿಣಿ ಎಂಬ ತೀರ್ಮಾನಕ್ಕೆ ಅಭಿಮಾನಿಗಳು ಬಂದುಬಿಟ್ಟಿದ್ದಾರೆ. ಈ ಹಿಂದೆಯೂ ಈ ರೀತಿಯ ಸುದ್ದಿಗಳು ಹಬ್ಬಿದ್ದವು. ಆದರೆ ಅನುಷ್ಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.