Monday, September 14, 2026

BDA Apartments

Home Front Page ಕರ್ನಾಟಕದವರಿಗೆ, ವೋಟ್ ಇದ್ದವರಿಗೆ ಮಾತ್ರ ಗ್ಯಾರಂಟಿ ಕೊಡ್ತೇವೆ- ಸಿಎಂ ಡಿ.ಕೆ ಶಿವಕುಮಾರ್

ಕರ್ನಾಟಕದವರಿಗೆ, ವೋಟ್ ಇದ್ದವರಿಗೆ ಮಾತ್ರ ಗ್ಯಾರಂಟಿ ಕೊಡ್ತೇವೆ- ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು,ಜೂನ್,15,2026 (www.justkannada.in): ಕರ್ನಾಟಕದವರಿಗೆ, ವೋಟ್ ಇದ್ದವರಿಗೆ ಮಾತ್ರ ನಾವು ಗ್ಯಾರಂಟಿ ಕೊಡುತ್ತೇವೆ ಎಂದು ಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್,  ಗ್ಯಾರಂಟಿಗಳಿಗೆ ದಾಖಲೆಬೇಕು ಫೋಟೊ ಬೇಕು. ಆಗ ತರಾತುರಿಯಲ್ಲಿ ಯಾರದ್ದೋ ನಂಬರ್ ಕೊಟ್ಟಿದ್ದಾರೆ . ಆದರ ಹಣ ಯಾರದ್ದೋ ಅಕೌಂಟ್ ಗೆ ಹೋಗುತ್ತಿದೆ. ವೋಟ್ ಇದ್ದವರಿಗೆ ಮಾತ್ರ ಗ್ಯಾರಂಟಿಗಳನ್ನ ಕೊಡುತ್ತೇವೆ.  ನಾವು ಕರ್ನಾಟಕದವರಿಗೆ ಮಾತ್ರ  ಗ್ಯಾರಂಟಿ ನೀಡುತ್ತೇವೆ ಎಂದರು.ಕರ್ನಾಟಕದವರಿಗೆ BDA JK_Adv BDA Adv

ಗ್ಯಾರಂಟಿ ನಿಲ್ಲಿಸುತ್ತಾರೆ ಎಂಬ ಬಿಜೆಪಿ ಟೀಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್,  ವಿರೋದ ಪಕ್ಷದವರು ಇರುವುದೇ ಟೀಕೆ ಮಾಡೋಕೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸುವುದಿಲ್ಲ ವಿಪಕ್ಷಗಳ ಆರೋಪ ಸುಳ್ಳು. ಪಾಪ ವಿರೋಧ ಪಕ್ಷದವರು ಮಾತನಾಡುತ್ತಾ ಇರಲಿ ಎಂದರು. ವೋಟ್ ಇದ್ದವರಿಗೆ ಮಾತ್ರ ಗ್ಯಾರಂಟಿ ಕೊಡ್ತೇವೆ jk02_new jk02 new

Key words: Guarantees, CM, DK Shivakumar, Vote