Monday, August 10, 2026

BDA Apartments

Home Front Page ಆರ್ ಎಸ್ ಎಸ್ ಗೆ ಮಂಜೂರಾಗಿದ್ದ ಜಮೀನು ಹಸ್ತಾಂತರಕ್ಕೆ ತಡೆ ನೀಡಿದ ಸರ್ಕಾರ.

ಆರ್ ಎಸ್ ಎಸ್ ಗೆ ಮಂಜೂರಾಗಿದ್ದ ಜಮೀನು ಹಸ್ತಾಂತರಕ್ಕೆ ತಡೆ ನೀಡಿದ ಸರ್ಕಾರ.

ಬೆಂಗಳೂರು, ಜುಲೈ 14,2023(www.justkannada.in):  ಆರ್​ ಆರ್​ ಎಸ್ ​ಗೆ ಕಾಂಗ್ರೆಸ್​ ಸರ್ಕಾರ ಬಿಗ್ ಶಾಕ್ ನೀಡಿದ್ದು, ಆರ್ ಎಸ್ ಎಸ್ ಗೆ ಮಂಜೂರಾಗಿದ್ದ ಭೂಮಿ ಹಸ್ತಾಂತರಕ್ಕೆ  ರಾಜ್ಯ ಕಾಂಗ್ರೆಸ್ ಸರ್ಕಾರ ತಡೆ ನೀಡಿದೆ.

ಬೆಂಗಳೂರಿನ ತಾವರಕೆರೆಯ ಕುರುಬರಹಳ್ಳಿಯಲ್ಲಿರುವ 35.33 ಎಕರೆ ಭೂಮಿಯನ್ನು ಜನಸೇವಾ ಟ್ರಸ್ಟ್​ಗೆ ಈ ಹಿಂದೆ ಬಿಜೆಪಿ ಸರ್ಕಾರ ಮಂಜೂರು ಮಾಡಿತ್ತು. ಆದರೆ, ಇದೀಗ ಕಾಂಗ್ರೆಸ್​ ಸರ್ಕಾರ ತಡೆ ಹಿಡಿದಿದೆ. ಕಾಂಗ್ರೆಸ್​ ಸರ್ಕಾರ ಬಂದ ಒಂದೇ ವಾರಕ್ಕೆ ಭೂಮಿ ಹಸ್ತಾಂತರಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದರು.

ಈ ಬಗ್ಗೆ ಇಂದು ಸದನದಲ್ಲಿ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಲಿಖಿತ ಉತ್ತರ ನೀಡಿದರು.ses

ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಎಷ್ಟು ಸರ್ಕಾರಿ ಜಮೀನನ್ನು ಸಂಘ-ಸಂಸ್ಥೆಗಳಿಗೆ ಇಲಾಖೆಗಳಿಗೆ ಮತ್ತು ವಿವಿಧ ಉದ್ದೇಶಗಳಿಗೆ ನೀಡಲಾಗಿದೆ ಎಂದು ಸೋಮಶೇಖರ್​ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೃಷ್ಣ ಬೈರೇಗೌಡ, ಜನಸೇವಾ ಟ್ರಸ್ಟ್​ಗೆ ನೀಡಲಾಗಿದ್ದ 35 ಎಕರೆ 33 ಗುಂಟೆ ಭೂಮಿಯನ್ನು ತಡೆಹಿಡಿಯಲಾಗಿದೆ ಎಂದು ಮಾಹಿತಿ ನೀಡಿದರು.

Key words: government –stay-  transfer – land-allotted – RSS.