Friday, October 16, 2026

Dasara Wishes

Happy Dasara
Home Front Page ರಾಮರಾಜ್ಯ ಸರ್ಕಾರ ತಂದಿದ್ದೇವೆ ಎಂದಿದ್ದವರು ಆತ್ಮಾವಲೋಕನ ಮಾಡಿಕೊಳ್ಳಲಿ- ಹೆಚ್.ವಿಶ್ವನಾಥ್ ಗೆ ಹೆಚ್.ಡಿ ಕುಮಾರಸ್ವಾಮಿ ಟಾಂಗ್…

ರಾಮರಾಜ್ಯ ಸರ್ಕಾರ ತಂದಿದ್ದೇವೆ ಎಂದಿದ್ದವರು ಆತ್ಮಾವಲೋಕನ ಮಾಡಿಕೊಳ್ಳಲಿ- ಹೆಚ್.ವಿಶ್ವನಾಥ್ ಗೆ ಹೆಚ್.ಡಿ ಕುಮಾರಸ್ವಾಮಿ ಟಾಂಗ್…

ಬೆಂಗಳೂರು,ಮಾರ್ಚ್,3,2021(www.justkannada.in): ರಮೇಶ್ ಜಾರಕಿಹೊಳಿ ಸಿಡಿ ವಿಡಿಯೋ ವಿಚಾರ ಬಹಿರಂಗ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಗೆ ಟಾಂಗ್ ನೀಡಿದ್ದಾರೆ.jk

ಕರ್ನಾಟಕದಲ್ಲಿ ರಾಕ್ಷಸಿ ಸರ್ಕಾರ ತೆಗೆದು ರಾಮರಾಜ್ಯ ಸರ್ಕಾರ ತಂದಿದ್ದೇವೆ ಎಂದಿದ್ದರು. ಯಾವ ರಾಮರಾಜ್ಯ ತಂದಿದ್ದಾರೆ ಅಂತಾ ಅವಲೋಕನ ಮಾಡಿಕೊಳ್ಳಲಿ ಎಂದು ಹೆಚ್.ಡಿ ಕುಮಾರಸ್ವಾಮಿ ಹಳ್ಳಿಹಕ್ಕಿಯ ಕಾಲೆಳೆದಿದ್ದಾರೆ.

ಈ ಪ್ರಕರಣ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ರಾಜಕೀಯ ವ್ಯಕ್ತಿಗಳದ್ದು ಈ ರೀತಿಯ ನಡವಳಿಕೆ ಸರಿಯಲ್ಲ. ರಾಜಕಾರಣಿಗಳ ನಡವಳಿಕೆಯಿಂದ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಎಲ್ಲಾ ಬೆಳವಣಿಗೆಗಳಿಗೆ ಪ್ರಕರಣದ ಬಗ್ಗೆ  ಸಿಎಂ ಬಿಎಸ್ ಯಡಿಯೂರಪ್ಪ ಉತ್ತರ ಪಡಿಬೇಕು. ಮೊದಲು ಹೆಚ್.ವಿಶ್ವನಾಥ್ ರಿಂದ ಉತ್ತರ ಪಡಿಯೋದು ಸೂಕ್ತ . ಕರ್ನಾಟದಲ್ಲಿ ರಾಕ್ಷಸಿ ಸರ್ಕಾರ ತೆಗೆದು ರಾಮರಾಜ್ಯ ಸರ್ಕಾರ ತಂದಿದ್ದೇವೆ ಎಂದಿದ್ದರು. ಯಾವ ರಾಮರಾಜ್ಯ ತಂದಿದ್ದಾರೆ ಅಂತಾ ಅವಲೋಕನ ಮಾಡಿಕೊಳ್ಳಲಿ ಎಂದು ಕುಟುಕಿದರು.Government- ramarajya- H. Vishwanath - H.D. Kumaraswamy -Tong.

ಸಿಡಿ ಇಂತಹ ವಿಚಾರ ಇಟ್ಟುಕೊಂಡು ರಾಜಕೀಯ ಮಾಡಲು ಇಷ್ಟವಿಲ್ಲ.  ನನ್ನ ಸರಕಾರ ತೆಗೆದ್ರು ಬೇಜಾರಿಲ್ಲ. ಇದಕ್ಕೆ ಬಿಎಸ್ ವೈ ಉತ್ತರ ಕೊಡಬೇಕು ಎಂದು ಹೆಚ್.ಡಿಕೆ ಆಗ್ರಹಿಸಿದರು.

Key words: Government- ramarajya- H. Vishwanath – H.D. Kumaraswamy -Tong.