ಸರ್ಕಾರದ ಹಣಕಾಸಿನ ನೆರವು ಇಲ್ಲದೆ ನಡೆಯುತ್ತಿರುವ ಬೃಹತ್ ಯೋಜನೆ ರಾಮಮಂದಿರ ನಿರ್ಮಾಣ : ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ

ಬೆಂಗಳೂರು,ಫೆಬ್ರವರಿ,15,2021(www.justkannada.in) : ರಾಮ ಮಂದಿರ ನಿರ್ಮಾಣ ವಿಚಾರ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಸರ್ಕಾರದ ಯಾವುದೇ ಹಣಕಾಸಿನ ನೆರವು ಇಲ್ಲದೆ, ಯಾವುದಾದರು ಬೃಹತ್ ಯೋಜನೆ ನಡೆಯುತ್ತಿದೆ ಎಂದರೆ ಅದು ರಾಮಮಂದಿರ ನಿರ್ಮಾಣ ಮಾತ್ರ ಮಾತ್ರ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.jkಶ್ರೀರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ. ದೇಣಿಗೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಭಾವನಾತ್ಮಕ ವಿಚಾರ‌ವಲ್ಲ. ರಾಮಮಂದಿರ ನಿರ್ಮಾಣ ಈ ದೇಶದ ಜನರ ಸುದೀರ್ಘ ಕನಸು ಎಂದರು.

ರಾಮಮಂದಿರ ನಿರ್ಮಾಣ ಮಾಡಲು ಹಲವರು ಅವರೇ ಕಟ್ಟಡ ನಿರ್ಮಾಣ ಮಾಡುವುದಾಗಿ ಮುಂದೆ ಬಂದಿದ್ದರು. ಆದರೆ, ಈ ದೇಶದ ಎಲ್ಲರೂ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಬೇಕು ಎನ್ನುವ ಉದ್ದೇಶದಿಂದ ಇದಕ್ಕೆ ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ.

ದೇಶದ ಪ್ರತಿಯೊಬ್ಬರ ಕೊಡುಗೆಯಿಂದ ರಾಮ ಮಂದಿರ ನಿರ್ಮಾಣGovernment-finances-Without-assistance-Huge-project-Ram Mandir-Construction-Union minister-D.V. Sadananda Gowda

ಈ ದೇಶದ ಪ್ರತಿಯೊಬ್ಬರ ಕೊಡುಗೆಯಿಂದ ರಾಮ ಮಂದಿರ ನಿರ್ಮಾಣವಾಗುತ್ತಿದೆ.‌ ರಾಮಮಂದಿರ ಜೊತೆಗೆ ರಾಮನ ಆದರ್ಶವೂ ಪಾಲನೆ ಆಗಬೇಕ ಎಂದು ತಿಳಿಸಿದರು.

key words : Government-finances-Without-assistance-Huge-project-Ram Mandir-Construction-Union minister-D.V. Sadananda Gowda