ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಸರಳ ದಸರಾ ಆಚರಣೆ ಪರೋಕ್ಷವಾಗಿ ಸ್ವಾಗತಿಸಿದ ಮಾಜಿ ಶಾಸಕ ವಾಸು…

ಮೈಸೂರು,ಸೆಪ್ಟಂಬರ್,22,2020(www.justkannada.in): ರಾಜ್ಯದಲ್ಲಿ  ಕೊರೋನಾ ಅಟ್ಟಹಾಸ ಹೆಚ್ಚಾಗಿದ್ದು ಈ ನಡುವೆ ಕೊರೋನಾ ಪರಿಸ್ಥಿತಿ ನಿರ್ವಹಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಇಡೀ ಸರ್ಕಾರವೇ ವಿಫಲವಾಗಿದೆ ಎಂದು ಮಾಜಿ ಶಾಸಕ ವಾಸು ಆರೋಪಿಸಿದರು.jk-logo-justkannada-logo

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಕೊರೊನಾ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ಕಿಡಿಕಾರಿದ ಮಾಜಿ ಶಾಸಕ ವಾಸು, ಕೆ. ಆರ್ ಆಸ್ಪತ್ರೆಗೆ ಈಗಾಗಲೇ ರೋಗಿಗಳ ಒತ್ತಡ ಹೆಚ್ಚಾಗುತ್ತಿದೆ. ಮೈಸೂರಿನ ಅಕ್ಕಪಕ್ಕದ ಜಿಲ್ಲೆಯ ಜನರೂ ಸಹ ಕೆ.ಆರ್ ಆಸ್ಪತ್ರೆ ಮೇಲೆ ಅವಲಂಬಿತರಾಗಿದ್ದಾರೆ. ಜಿಲ್ಲೆಯ ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಗಂಭೀರವಾಗಿದೆ. ಈಗಾಗಲೇ ಕೆ.ಆರ್.ಆಸ್ಪತ್ರೆಯಲ್ಲಿನ ಕೆಲವು ವೆಂಟಿಲೇಟರ್ ಗಳು ಕೆಟ್ಟಿವೆ. ಸರ್ಕಾರ ನಮ್ಮ ಬಳಿ ಆಕ್ಸಿಜನ್, ವೆಂಟಿಲೇಟರ್ ಕೊರತೆ ಇಲ್ಲ ಎಂದು ಹೇಳುತ್ತಿದೆ. ಆದರೆ ಪ್ರತಿ ದಿನ ಕೊರೋನಾ ಸೋಂಕಿತರು ಬೆಡ್, ಆಕ್ಸಿಜನ್, ವೆಂಟಿಲೇಟರ್ ಸಿಗದೇ ಸಾಯುತ್ತಿದ್ದಾರೆ. ಜೊತೆಗೆ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ ಕೊರತೆಯೂ ಸಹ ಇದೆ. ಇಷ್ಟಿದ್ದರೂ ಸರ್ಕಾರ ಎಚ್ಚೆತ್ತುಕೊಂಡು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.government-failure-corona-management-former-mla-vasu

ರಾಜ್ಯ ಸರ್ಕಾರ ಈ ಬಾರಿ ಸರಳ ದಸರಾ ಆಚರಣೆಗೆ ನಿರ್ಧರಿಸಿರುವ ಕುರಿತು ಪ್ರತಿಕ್ರಿಯಿಸಿದ ವಾಸು, ನಾಡಹಬ್ಬ ದಸರಾ ಅದು ಕೇವಲ ಹಬ್ಬ ಮಾತ್ರವಲ್ಲ ಅದು ಜನರ ಭಾವನೆ. ಜನರ ಭಾವನೆಗಳಿಗೆ ಧಕ್ಕೆ ಬರುವ ವಿಚಾರ ಬೇಡ. ಸರಳ ದಸರಾ ಸರ್ಕಾರದ ನಿರ್ಧಾರವಾಗಿದೆ ಎಂದು ಪರೋಕ್ಷವಾಗಿ ಸರಳ ದಸರಾ ಆಚರಣೆಯನ್ನ ಸ್ವಾಗತಿಸಿದರು.

Key words: Government failure – Corona- management- former MLA -Vasu