Thursday, August 13, 2026

BDA Apartments

Home Front Page ಕೊರೋನಾ ತಡೆಗೆ ಸಚಿವರ ತಂಡ ರೆಡಿ: ಅಯಾ ಜಿಲ್ಲೆಗಳಲ್ಲೇ ಉಸ್ತುವಾರಿ ಸಚಿವರು ಇರುವಂತೆ ಸಿಎಂ ಬಿಎಸ್...

ಕೊರೋನಾ ತಡೆಗೆ ಸಚಿವರ ತಂಡ ರೆಡಿ: ಅಯಾ ಜಿಲ್ಲೆಗಳಲ್ಲೇ ಉಸ್ತುವಾರಿ ಸಚಿವರು ಇರುವಂತೆ ಸಿಎಂ ಬಿಎಸ್ ವೈ ಸೂಚನೆ…

ಬೆಂಗಳೂರು,ಮೇ,4,2021(www.justkannad.in): ರಾಜ್ಯದಲ್ಲಿ ಸದ್ಯಕ್ಕೆ ಲಾಕ್ ಡೌನ್ ಇಲ್ಲ:ಮೇ 12ರವರೆಗೆ ಕರ್ಫ್ಯೂ ಮುಂದುವರೆಯಲಿದೆ. ಕೇಂದ್ರದ ನಿರ್ಧಾರದ ಮೇಲೆ ಲಾಕ್ ಡೌನ್ ಭವಿಷ್ಯ ನಿಂತಿದೆ ಎನ್ನಲಾಗಿದೆ.

ಕೊರೋನಾ ನಿಯಂತ್ರಣ ಕುರಿತು ಇಂದು   ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆ ಬಳಿಕ ಸಿಎಂ ಬಿಎಸ್ ಯಡಿಯೂರಪ್ಪ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು.  ಕೋವಿಡ್ ವಾರ್ ರೂಂ ಜವಾಬ್ದಾರಿ ಅರವಿಂದ ಲಿಂಬಾವಳಿ ಹೆಗಲಿಗೆ. ಸಚಿವ ಜಗದೀಶ್ ಶೆಟ್ಟರ್ ಗೆ ಆಕ್ಸಿಜನ್ ಉಸ್ತುವಾರಿ, ಬೆಡ್ ವ್ಯವಸ್ಥೆ ಬಸವರಾಜಬೊಮ್ಮಾಯಿ ಮತ್ತು ಆರ್ ಅಶೋಕ್ ಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕೊರೋನಾ ತಡೆಗೆ ಸಚಿವರ ತಂಡ ರೆಡಿಯಾಗಿದ್ದು,  ಅಯಾ ಜಿಲ್ಲೆಗಳಲ್ಲೇ ಉಸ್ತುವಾರಿ ಸಚಿವರು ಇರುವಂತೆ ಸಿಎಂ ಬಿಎಸ್ ವೈ ಖಡಕ್ ಸೂಚನೆ ನೀಡಿದ್ದಾರೆ.

Key words: Ministers’ Team- Ready –Corona-cm bs yeddyurappa