ನಟ ದಿ.ಅಮರೀಶ್ ಪುರಿಗೆ ಗೂಗಲ್ ಡೂಡಲ್ ಗೌರವ

ಮುಂಬೈ, ಜೂನ್ 22, 2019 (www.justkannada.in): ಇಂದು ಬಾಲಿವುಡ್ ಹಿರಿಯ ನಟ ದಿ. ಅಮರೀಶ್ ಪುರಿ ಅವರ 87ನೇ ಜನ್ಮ ದಿನ.

ಈ ಸಂದರ್ಭದಲ್ಲಿ ಗೂಗಲ್ ತನ್ನ ಡೂಡಲ್ ಮೂಲಕ ಖ್ಯಾತ ನಟನಿಗೆ ಗೌರವ ಅರ್ಪಿಸಿದೆ. ಕನ್ನಡವೂ ಸೇರಿದಂತೆ ಹತ್ತಕ್ಕೂ ಅಧಿಕ ಭಾಷೆಗಳಲ್ಲಿ ಅಮರೀಶ್ ಪುರಿ ಅಭಿನಯಿಸಿದ್ದು, ತಮ್ಮ 70ನೇ ವಯಸ್ಸಿನಲ್ಲಿ ನಿಧನರಾಗಿದ್ದರು.

ಪಂಜಾಬಿನಲ್ಲಿ ಜೂನ್ 22, 1932 ರಂದು ಜನಿಸಿದ್ದ ಅಮರೀಶ್ ಪುರಿ, ತಮ್ಮ 39ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿದ್ದರು. ತಮ್ಮ ಅಂತಿಮ ದಿನದವರೆಗೂ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದ ಅಮರೀಶ್ ಪುರಿ ನಾನೂರಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.