ಇಂದಿನಿಂದ ‘ಕಲರ್ಸ್ ಕನ್ನಡ’ದಲ್ಲಿ ಪುನೀತ್ ಜತೆ ‘ಕನ್ನಡದ ಕೋಟ್ಯಾಧಿಪತಿ’

ಬೆಂಗಳೂರು, ಜೂನ್ 22, 2019 (www.justkannada.in): ‘ಕನ್ನಡದ ಕೋಟ್ಯಾಧಿಪತಿ’ ಇಂದಿನಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ಮೂಲಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತೆ ಕಿರುತೆರೆಗೆ ರಿ ಎಂಟ್ರಿ ಕೊಡುತ್ತಿದ್ದು, ಏಳು ವರ್ಷಗಳ ಬಳಿಕ ಪುನೀತ್ ರಾಜಕುಮಾರ್ ಮತ್ತೆ ‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಜ್ಯಾದ್ಯಂತ ಈಗಾಗಲೇ ಆಡಿಷನ್ ನಡೆಸಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದ್ದು, ಇದರ ಜೊತೆಗೆ ವೀಕ್ಷಕರಿಗೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗುತ್ತಿದೆ.