ಮತ್ತೊಮ್ಮೆ ವಿಭಿನ್ನ ಗೆಟಪ್’ನಲ್ಲಿ ಕಾಣಿಸಿಕೊಂಡ ‘ಬಿಗ್ ಬಿ’ ಬಚ್ಚನ್ !

ಮುಂಬೈ, ಜೂನ್ 22, 2019 (www.justkannada.in): ಅಮಿತಾಭ್ ಬಚ್ಚನ್ ಈಗ ಮತ್ತೊಮ್ಮೆ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಬಾರಿ ಉದ್ದ ದಾಡಿ ಬಿಟ್ಟಿರುವ ಹಣ್ಣು ಹಣ್ಣು ಮುದುಕನಾಗಿ ಅಮಿತಾಭ್ ಮಿಂಚಿದ್ದಾರೆ. ‘ಗುಲಾಬೋ ಸಿತಾಬೋ’ ಚಿತ್ರದಲ್ಲಿ ಮತ್ತೊಂದು ವಿಭಿನ್ನ ಅವತಾರದ ಮೂಲಕ ಅಭಿಮಾನಿಗಳ ಮುಂದೆ ಬರಲು ಬಿಗ್ ಬಿ ತಯಾರಿ ನಡೆಸಿದ್ದಾರೆ.

ಪಿಕು, ಶಮಿತಾಭ್, ವಜೀರ್ ಮುಂತಾದ ಚಿತ್ರಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುವ ಜೊತೆಗೆ ಭಾವತಾನ್ಮಕ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತ ಬಂದಿರುವ ಬಿಗ್ ಬಿ ಈಗ ಮತ್ತೊಮ್ಮೆ ಹೊಸ ಅವತಾರದಲ್ಲಿ ದರ್ಶನ ನೀಡಿದ್ದಾರೆ.