Sunday, September 13, 2026

BDA Apartments

Good News: ದೇಶದಲ್ಲಿ 71 ದಿನಗಳ ಬಳಿಕ ಕನಿಷ್ಠ ಕೊರೊನಾ ಪ್ರಕರಣ ದಾಖಲು BDA JK_Adv BDA Adv
Home Front Page Good News: ದೇಶದಲ್ಲಿ 71 ದಿನಗಳ ಬಳಿಕ ಕನಿಷ್ಠ ಕೊರೊನಾ ಪ್ರಕರಣ ದಾಖಲು

Good News: ದೇಶದಲ್ಲಿ 71 ದಿನಗಳ ಬಳಿಕ ಕನಿಷ್ಠ ಕೊರೊನಾ ಪ್ರಕರಣ ದಾಖಲು

ಬೆಂಗಳೂರು, ಜೂನ್ 13, 2021 (www.justkannada.in): ದೇಶದಾದ್ಯಂತ ಭಾನುವಾರ 80,834 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಸತತ 4ನೇ ದಿನವೂ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ.  ಕಳೆದ 71 ದಿನಗಳ ಸೋಂಕಿತರ ಕನಿಷ್ಟ ಸಂಖ್ಯೆ ಇದಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದ್ದು, ಇದೇ ಅವಧಿಯಲ್ಲಿ 3,303 ಮಂದಿ ಮಹಾಮಾರಿ ವೈರಸ್’ಗೆ ಬಲಿಯಾಗಿದ್ದಾರೆ ಎಂದು ವರದಿ ನೀಡಿದೆ.

ಶನಿವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,94,39,989ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 3,70,384ಕ್ಕೆ ಏರಿಕೆಯಾಗಿದೆ.