ವಿಜಯಪುರ ಜಿಲ್ಲೆಯಲ್ಲಿ ಭೂ ಕಂಪನ: ನಿದ್ದೆ ಇಲ್ಲದೇ ರಾತ್ರಿ ಕಳೆದ ಜನ

ಬೆಂಗಳೂರು, ಜೂನ್ 13, 2021 (www.justkannada.in): ವಿಜಯಪುರ ಜಿಲ್ಲೆಯ ಜನರಿಗೆ ಭೂಮಿ ಕಂಪಿಸಿದಂತ ಅನುಭವವಾಗಿದೆ.

ಹೆದರಿದ ಜನ ಮನೆಯಿಂದ ಹೊರ ಓಡಿ ಬಂದು, ರಾತ್ರಿಯಿಡೀ ನಿದ್ದೆ ಇಲ್ಲದೇ ರಾತ್ರಿ ಕಳೆದ ಘಟನೆ ಭಾನುವಾರ ಮಧ್ಯರಾತ್ರಿ ನಡೆದಿದೆ.

ಭಾನುವಾರ ಮಧ್ಯರಾತ್ರಿ 2.25 ರಿಂದ 2.30ರ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಅನೇಕ ಭಾಗಗಳಲ್ಲಿ ಭೂಮಿ ಕಂಪಿಸಿದಂತ ಅನುಭವವಾಗಿದೆ.

ವಿಜಯಪುರ ನಗರದ ಗ್ಯಾಂಗ್ ಬಾವಡಿ, ಲೋಹಗಾಂವ್ ಗ್ರಾಮ, ಅರಕೇರಿ, ಕಳ್ಳಕವಟಗಿ ಸೇರಿದಂತೆ ಅನೇಕ ಭಾಗಗಳಲ್ಲಿ ಭೂಕಂಪನದ ಅನುಭವ ಜನರಿಗೆ ಉಂಟಾಗಿದೆ.

ಈ ಭಾಗದಲ್ಲಿ ಭೂ ಕಂಪನ ಆಗಿದ್ಯಾ ಭೂಕಂಪನ ಮಾಪನ ಕೇಂದ್ರ ಖಚಿತ ಪಡಿಸಬೇಕಿದೆ.