ಪ್ರಥಮ ಪಿಯು ಪರೀಕ್ಷೆ- ಅಸೈನ್ಮೆಂಟ್: ಸ್ಪಷ್ಟನೆ ನೀಡಿದ ಸಚಿವ ಸುರೇಶ್ ಕುಮಾರ್

ಬೆಂಗಳೂರು, ಜೂನ್ 13, 2021 (www.justkannada.in): ರಾಜ್ಯ ಸರ್ಕಾರ ಘೋಷಿಸಿದಂತೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ.

ಈ ವಿಷಯವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಪರೀಕ್ಷೆ ಕೂಡ ನಡೆಸುತ್ತಿಲ್ಲ. ಈಗ ಪ್ರಕಟಿಸಲಾಗಿರುವಂತದ್ದು ಕೇವಲ ಅಸೈನ್ಮೆಂಟ್ ಮಾತ್ರ. ಮಕ್ಕಳ ನಿರಂತರ ಕಲಿಕೆಗೆ ಪ್ರಯತ್ನವಷ್ಟೇ. ಇದು ಫಲಿತಾಂಶಕ್ಕೆ ಮಾನದಂಡವೂ ಅಲ್ಲ ಎಂದು ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.

10 ದಿನ ಪಠ್ಯಪುಸ್ತಕ ನೋಡಿಯೇ ಉತ್ತರ ಬರೆದು ಕಳುಹಿಸಬಹುದು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ವೇತನಕ್ಕೆ ಪರಿಗಣನೆಗೆ ಮಾತ್ರ ಈಗ ನಡೆಸುತ್ತಿರುವಂತ ಅಸೈನ್ಮೆಂಟ್ ಎಂಬುದಾಗಿ ತಿಳಿಸಿದರು.