ಚಿನ್ನ , ಬೆಳ್ಳಿ, ವಜ್ರ ಮತ್ತಷ್ಟು ದುಬಾರಿ: ಮೊಬೈಲ್, ಕ್ಯಾಮರಾ ಲೆನ್ಸ್, ಟಿವಿ ಬೆಲೆ ಇಳಿಕೆ.

ನವದೆಹಲಿ, ಫೆಬ್ರವರಿ,1,2023(www.justkannada.in): ಇಂದು ಕೇಂದ್ರ ಬಜೆಟ್ ಮಂಡನೆಯಾಗಿದ್ದು ಚಿನ್ನ, ಬೆಳ್ಳಿ, ವಜ್ರ ಖರೀದಿದಾರರಿಗೆ ನಿರಾಸೆಯಾದರೇ ಕ್ಯಾಮರಾ ಲೆನ್ಸ್ ಟಿವಿ, ಮೊಬೈಲ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ.

ದೇಶದ ಚಿನ್ನಪ್ರಿಯರಿಗೆ ಬಜೆಟ್ ನಲ್ಲಿ ಶಾಕ್ ನೀಡಲಾಗಿದ್ದು , ಚಿನ್ನ, ಬೆಳ್ಳಿ ವಜ್ರ ಬೆಲೆ ಏರಿಕೆಯಾಗಲಿದೆ.   ಮೊಬೈಲ್ ಫೋನ್, ಕ್ಯಾಮರಾ ಲೆನ್ಸ್ ಆಮದು ಸುಂಕ ರದ್ದು ಮಾಡಲಾಗಿದ್ದು. ಮೊಬೈಲ್, ಕ್ಯಾಮರಾ ಲೆನ್ಸ್, ಟಿವಿ ಬೆಲೆ ಇಳಿಕೆಯಾಗಲಿದೆ.

ಲಿಥೀಯಂ ಬ್ಯಾಟರಿ ಮೇಲಿನ ಸುಂಕ ಕಡಿತ ಮಾಡಲಾಗಿದೆ, ಬಂಗಾರ, ಬೆಳ್ಳಿ, ವಜ್ರ ದುಬಾರಿಯಾಗಲಿದ್ದು . ಸಿಗರೇಟ್, ಪ್ಯಾಟಿನಂ, ರೆಡಿಮೆಡ್ ಬಟ್ಟೆಗಳು ಮತ್ತಷ್ಟು ದುಬಾರಿಯಾಗಲಿದೆ. ಬ್ಲೆಂಡೆಡ್ ಸಿಎನ್ ಜಿಗೆ ಕಸ್ಟಮ್ಸ್ ಸುಂಕ ರದ್ದು.ರೆಡಿಮೇಟ್ ಬಟ್ಟೆ ಬೆಲೆ ಏರಿಕೆ, ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ಬೆಲೆ ಇಳಿಕೆ.ವಿದೇಶಿ ವಾಹನಗಳ ಆಮದು ದುಬಾರಿಯಾಗಲಿದೆ.

Key words: Gold-silver- diamond -more expensive