ಜಮೀರ್ ಆಸ್ತಿಯನ್ನ ಸರ್ಕಾರಕ್ಕೆ ಕೊಡಿಸುತ್ತೇನೆ –ಸಿಸಿಬಿ ವಿಚಾರಣೆಗೂ ಮುನ್ನ ಪ್ರಶಾಂತ್ ಸಂಬರಗಿ ಹೇಳಿಕೆ…

ಬೆಂಗಳೂರು,ಸೆಪ್ಟಂಬರ್,12,2020(www.justkannada.in): ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರನ್ನ  ಸಿಸಿಬಿ  ವಿಚಾರಣೆ ನಡೆಸಲಿದ್ದು ಈ ಹಿನ್ನೆಲೆ ಪ್ರಶಾಂತ್ ಸಂಬರಗಿ ವಿಚಾರಣೆಗೆ ಹಾಜರಾಗಿದ್ದಾರೆ.jk-logo-justkannada-logo

ಡ್ರಗ್ಸ್ ದಂಧೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಕೊಟ್ಟಿತ್ತು. ಈ ಹಿನ್ನೆಲೆ ಪ್ರಶಾಂತ್ ಸಂಬರಗಿ ಸಿಸಿಬಿ ಕಚೇರಿಗೆ ಆಗಮಿಸಿದ್ದು ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ನಾನು ಜಮೀರ್ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತೇನೆ ಎಂದಿದ್ದಾರೆ.

ಸರ್ಕಾರಕ್ಕೆ ನಾನು ಹೊಸ ಆದಾಯ ತಂದು ಕೊಡುತ್ತೇನೆ. ಫೈಲ್ ನಲ್ಲಿರುವ ದಾಖಲೆಯಿಂದ ಶಾಸಕ ಜಮೀರ್ ಆಸ್ತಿ ಸರ್ಕಾರಕ್ಕೆ ಕೊಡಿಸುತ್ತೇನೆ. ಇವತ್ತು ಡ್ರಗ್ಸ್ ದಂಧೆಯ ಇಂಚಿಂಚು ಮಾಹಿತಿ ನೀಡುತ್ತೇನೆ ಎಂದು ಪ್ರಶಾಂತ್ ಸಂಬರಗಿ ತಿಳಿಸಿದ್ದಾರೆ.give-government-jamir-property-prashanth-sambaragi-ccb-hearing

ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಹಲವು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಬಂಧಿತರಿಂದ ಹೇಳಿಕೆಗಳನ್ನು ದಾಖಲಿಸಿದೆ. ನಟಿ ರಾಗಿಣಿ ದ್ವಿವೇದಿ, ನಟಿ ಸಂಜನಾ ಗಲ್ರಾನಿ ಸೇರಿದಂತೆ ಅನೇಕರು ಬಂಧನಕ್ಕೊಳಗಾಗಿದ್ದಾರೆ.

Key words:  give – government – Jamir –property-Prashanth Sambaragi –CCB- hearing