ದೇಶದಲ್ಲಿ ಒಂದೇ ದಿನ 97,570 ಮಂದಿಗೆ ಕೊರೋನಾ ಸೋಂಕು ಪತ್ತೆ…

ನವದೆಹಲಿ,ಸೆಪ್ಟಂಬರ್,12,2020(www.justkannada.in):  ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಕಳೆದ ಒಂದು ದಿನದಲ್ಲಿ, 97 ಸಾವಿರ ಜನರಿಗೆ ಕೊರೋನಾ ಸೋಂಕು ತಗುಲಿದೆ.jk-logo-justkannada-logo

ಸದ್ಯ ಕಳೆದ ಮೂರು ದಿನಗಳಿಂದ ಲಕ್ಷದ ಗಡಿ ಸಮೀಪದಲ್ಲಿ ಕೊರೋನಾ ಪ್ರಕರಣಗಳು ವರದಿಯಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ97,570 ಮಂದಿಗೆ ಕೊರೋನಾ ಸೋಂಕು ದೃಢವಾಗಿದೆ, ಈಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 46,59,985ಕ್ಕೆ  ಏರಿಕೆಯಾಗಿದೆ.97570-people-infected-coronavirus-single-day

ಒಂದು ದಿನ ಒಟ್ಟು 1,201  ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಒಟ್ಟು 9,58,316 ಸಕ್ರಿಯ ಪ್ರಕರಣಗಳು, 36,24,197 ಜನ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹಾಗೆಯೇ 77,472 ಸಾವುಗಳು ಸೇರಿದಂತೆ ಒಟ್ಟು ಪ್ರಕರಣಗಳ ಸಂಖ್ಯೆ 46,59,985 ಆಗಿದೆ.

Key words: 97,570 people- infected -coronavirus – single day