ಬಿಎಸ್ ವೈ-ಹೆಚ್.ಡಿಕೆ ಭೇಟಿ ಬಗ್ಗೆ ವಿಶೇಷ ಅರ್ಥ ಬೇಡ- ಡಿಸಿಎಂ ಗೋವಿಂದ ಕಾರಜೋಳ…

ದಾವಣಗೆರೆ,ಸೆಪ್ಟಂಬರ್,12,2020(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ನಿನ್ನೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಕುರಿತು ಇಂದು ಪ್ರತಿಕ್ರಿಯಿಸಿರುವ ಡಿಸಿಎಂ ಗೋವಿಂದ ಕಾರಜೋಳ, ಬಿಎಸ್ ವೈ-ಹೆಚ್.ಡಿಕೆ ಭೇಟಿ ವಿಶೇಷ ಅರ್ಥ ಬೇಡ ಎಂದಿದ್ದಾರೆ.jk-logo-justkannada-logo

ದಾವಣಗೆರೆಯಲ್ಲಿ ಇಂದು ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾಗಿರುವುದು ಕ್ಷೇತ್ರದ ವಿಚಾರವಾಗಿ ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಪ್ರಶ್ನಾತೀತ ನಾಯ. ಬಿಜೆಪಿಯಲ್ಲಿ ಅವರ ವಿರುದ್ದ ಯಾವುದೇ ಬೆಳವಣಿಗೆ ಇಲ್ಲ ಎಂದು ತಿಳಿಸಿದ್ದಾರೆ.no-need-specialize-cm-bs-yeddyurappa-hd-kumaraswamy-meet-dcm-govinda-karajol

ನಿನ್ನೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾಗಿ ಚರ್ಚಿಸಿದ್ದರು.

Key words: no need- specialize –CM  BS Yeddyurappa-HD kumaraswamy-meet-DCM Govinda karajol