ಆ.15ರಂದು ಮೆಟ್ರೋ ಪ್ರಯಾಣಿಕರಿಗೆ ರಿಯಾಯಿತಿ ನೀಡಿ- ಸಿಎಂ ಬೊಮ್ಮಾಯಿಗೆ ಡಿ.ಕೆ ಶಿವಕುಮಾರ್ ಮನವಿ.

 

ಬೆಂಗಳೂರು,ಆಗಸ್ಟ್,10,2022(www.justkannada.in): ಆಗಸ್ಟ್ 15 ಸ್ವಾತಂತ್ರ್ಯೋತ್ಸವದಂದು ಮೆಟ್ರೋ ಪ್ರಯಾಣಿಕರಿಗೆ ಶೇ.50 ರಷ್ಟು ರಿಯಾಯಿತಿ ನೀಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಎಂ​ಆರ್ ​​ಸಿ ಎಲ್ ​​ಗೆ ಪತ್ರ ಬರೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಡಿ.ಕೆ ಶಿವಕುಮಾರ್, ಆಗಸ್ಟ್​ 15, 75ನೇ ಸ್ವತಂತ್ರೋತ್ಸದಂದು ಮೆಟ್ರೋ ಪ್ರಯಾಣಿಕರಿಗೆ ಶೇ.50ರಷ್ಟು ರಿಯಾಯ್ತಿ ನೀಡಿ . ಆ.15ರಂದು ಕಾಂಗ್ರೆಸ್​​ನಿಂದ ನಡೆಯುವ ಸ್ವಾತಂತ್ರ್ಯೋತ್ಸವ ನಡಿಗೆ ಹಿನ್ನೆಲೆ ರಿಯಾಯ್ತಿ ನೀಡಿ, ಟ್ರಾಫಿಕ್ ಜಾಮ್ ಆಗದಂತೆ ತಡೆಯಲು ವಾಹನಗಳ ಬದಲು ಮೆಟ್ರೋ ಸಂಚಾರಕ್ಕೆ ಒತ್ತು ನೀಡಲು ಮನವಿ ಮಾಡಿದ್ದಾರೆ.

Key words: Give- discount -metro passengers – August 15-DK Shivakumar