2500 ಕೋಟಿ ಪಡೆಯಲು ಮತ್ತೊಮ್ಮೆ ಸಿಎಂ ಬದಲಾವಣೆ- ಹೊಸ ಬಾಂಬ್ ಸಿಡಿಸಿದ ಬಿ.ಕೆ ಹರಿಪ್ರಸಾದ್.

ಬೆಂಗಳೂರು,ಆಗಸ್ಟ್,10,2022(www.justkannada.in): ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿರುವ ಬೆನ್ನಲ್ಲೆ ಇದೀಗ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಜೆಪಿ ಹೈಕಮಾಂಡ್ 2500 ಕೋಟಿ ಪಡೆಯಲು ಮತ್ತೊಮ್ಮೆ ಸಿಎಂ ಬದಲಾವಣೆಗೆ ಮುಂದಾಗಿದೆ ಎಂದು ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು,  ಅಮಿತ್ ಶಾ ವೀಳ್ಯೆದೆಲೆ ಶಾಸ್ತ್ರ ಮಾಡಲು ಇಲ್ಲಿಗೆ ಬಂದಿದ್ರಾ..? ರಾಜ್ಯಕ್ಕೆ ಅವರು ಬಂದು ಸಿಎಂಗೆ ಗೃಹಸಚಿವರಿಗೆ ಏನು ಹೇಳಿದ್ದಾರೆ ಎಂಬುದು ಗೊತ್ತಿದೆ.  ಸಿಎಂ ಆಗಬೇಕು ಅಂದ್ರೆ 2500 ಕೋಟಿ ಕೊಡಬೇಕಾಗಿದೆ. ಈ ಮಾತನ್ನ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳಿದ್ದರು.

ಈಗ 2500 ಕೋಟಿ ಪಡೆಯಲು ಮತ್ತೊಮ್ಮೆ ಸಿಎಂ ಬದಲಾವಣೆಗೆ ಮುಂದಾಗಿದ್ದಾರೆ. ಇದರಿಂದ 7500 ಕೋಟಿ ಆಗುತ್ತೆ. ಹೀಗೆ ಲೂಟಿ ಮಾಡುತ್ತಿದ್ದಾರೆ. ಅಮಿತ್ ಶಾ ಯಾವ ರಾಜ್ಯಕ್ಕೆ ಹೋದ್ರೂ ಬದಲಾವಣೆಯಾಗುತ್ತೆ ಎಂದು ಬಿಕೆ ಹರಿಪ್ರಸಾದ್ ತಿಳಿಸಿದರು.

Key words: Change – CM -again – get- 2500 crores- BK Hariprasad – new bomb.