ಶೀಘ್ರ ‘ಒಟಿಟಿ’ಗೆ ಬರಲಿದೆ ಶೆಟ್ಟರ ‘ಗರುಡ ಗಮನ ವೃಷಭ ವಾಹನ’

ಬೆಂಗಳೂರು, ಡಿಸೆಂಬರ್ 27, 2021 (www.justkannada.in): ‘ಗರುಡ ಗಮನ ವೃಷಭ ವಾಹನ’ ಚಿತ್ರ ಶೀಘ್ರದಲ್ಲೇ ಜೀ5 ಮೂಲಕ ಒಟಿಟಿ ಪ್ರೇಕ್ಷಕರನ್ನು ರಂಜಿಸಲಿದೆ.

ಈಗಾಗಲೇ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಜನಮೆಚ್ಚುಗೆ ಗಳಿಸಿದ್ದ ‘ಗರುಡ ಗಮನ ವೃಷಭ ವಾಹನ’ ಒಟಿಟಿಯಲ್ಲಿ ಲಭ್ಯವಾಗುತ್ತಿವೆ.

‘ಗರುಡ ಗಮನ ವೃಷಭ ವಾಹನ’ ರೈಟ್ಸ್ ಜೀ5 ಪಾಲಾಗಿದೆ. ಶೀಘ್ರವೇ ಈ ಚಿತ್ರ ಆನ್​ಲೈನ್​ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಅಂದಹಾಗೆ 2021ರಲ್ಲಿ ಪ್ರೇಕ್ಷಕರ ಮನಗೆದ್ದ ಸಿನಿಮಾಗಳ ಪೈಕಿ ‘ಗರುಡ ಗಮನ ವೃಷಭ ವಾಹನ’ ವಾಹನ ಚಿತ್ರ ಕೂಡ ಪ್ರಮುಖವಾಗಿದೆ.

ಟ್ರೇಲರ್​ನಿಂದಲೇ ಭಾರಿ ಕುತೂಹಲ ಸೃಷ್ಟಿಸಿದ್ದ ‘ಗರುಡ ಗಮನ ವೃಷಭ ವಾಹನ’ ಚಿತ್ರ ನ.19ರಂದು ತೆರೆಕಂಡಿತು. ಮೊದಲ ದಿನವೇ ಈ ಸಿನಿಮಾಗೆ ಉತ್ತಮ ರೆಸ್ಪಾನ್ಸ್​ ಸಿಕ್ಕಿತು.