ಗ್ಯಾಂಗ್ ರೇಪ್ ಪ್ರಕರಣ: ಬಾಲ ಆರೋಪಿ ಸೇರಿ ಐವರ ಬಂಧನ- ಡಿಜಿ&ಐಜಿಪಿ ಪ್ರವೀಣ್ ಸೂದ್ ಹೇಳಿಕೆ.

ಮೈಸೂರು,ಆಗಸ್ಟ್,28,2021(www.justkannada.in): ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲ ಆರೋಪಿ ಸೇರಿ ಐದು ಮಂದಿಯನ್ನ ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಮೈಸೂರಿನ ಎಸ್ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಮಾಹಿತಿ ನೀಡಿದ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ. ಪ್ರಕರಣ ಸಂಬಂಧ 5 ಮಂದಿ ಬಂಧಿಸಿದ್ದೇವೆ.   ಐವರು ಆರೋಪಿಗಳ ಪೈಕಿ ಒಬ್ಬ ಬಾಲಾರೋಪಿ.  ಆರೋಪಿಗಳ ಪತ್ತೆಗೆ 7 ತಂಡ ರಚಿಸಲಾಗಿತ್ತು .

 

ಆ.24 ರಂದು 7-8ಗಂಟೆ ನಡುವೆ ಘಟನೆ ನಡೆದಿದೆ. 3 ಲಕ್ಷ ದುಡ್ಡು ಕೇಳಿದ್ರು ಯುವಕ‌, ಯುವತಿ ಹಣ ನೀಡಿಲ್ಲ. ಇದುವರೆಗೂ ನಮಗೆ ಸಂತ್ರಸ್ಥೆಯಿಂದ ಒಂದು ಮಾಹಿತಿ ಸಿಕ್ಕಿಲ್ಲ. ಸಂತ್ರಸ್ತೆಯ ಸ್ನೇಹಿತನಿಂದ ಸ್ವಲ್ಪ ಮಾಹಿತಿ ಸಿಕ್ಕಿತು. ಐದು ಮಂದಿ ಬಂಧನವಾಗಿದೆ. ಹೈಕೋರ್ಟ್ ಆದೇಶದಂತೆ ಜಾಸ್ತಿ ಮಾಹಿತಿ ನೀಡಲಾಗಲ್ಲ. ಐವರೂ ಕೂಡಾ ತಮಿಳುನಾಡಿನ ತಿರುಪುರದವರು.  ಪ್ರಕರಣದಲ್ಲಿ 6 ಮಂದಿ ಆರೋಪಿಗಳಿದ್ದಾರೆ. ಈ ಪೈಕಿ ಓರ್ವ ತಲೆಮರಿಸಿಕೊಂಡಿದ್ದಾನೆ.ಟೆಕ್ನಿಕಲ್ ಸೈಂಟಿಫಿಕ್ ಎವಿಡೆನ್ಸ್ ಮೇಲೆ ಆರೋಪಿಗಳನ್ನ ಬಂಧಿಸಲಾಗಿದೆ. ಆರೋಪಿಗಳು  ಆಗಾಗ್ಗೆ ಮೈಸೂರಿಗೆ ಬರ್ತಾ ಇದ್ದರು. ಇವರೆಲ್ಲಾ ಲೇಬರ್ ಕ್ಲಾಸ್ ನವರು, ಚಾಲಕರು, ಕೂಲಿ ಕೆಲಸದವರು. ಪ್ರಾಥಮಿಕ ಮಾಹಿತಿ ಪ್ರಕಾರ ಓರ್ವ ಅಪ್ರಾಪ್ತ ಇದ್ದಾನೆ. 17 ವರ್ಷದ ಯುವಕ. ಆದ್ರೆ ಈ ಬಗ್ಗೆ ಇನ್ನೂ ಪರಿಶೀಲನೆ ಮಾಡಬೇಕು.ಓರ್ವ 8ನೇ ಕ್ಲಾಸ್ ಮತ್ತೋರ್ವ 7ನೇ ಕ್ಲಾಸ್ ಮತ್ತೋರ್ವ ಏನು ಓದಿಲ್ಲ. ಎಲ್ಲಾ ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಬಗ್ಗೆ ಮಾಹಿತಿ ಇದೆ.  ಎಂದು ಪ್ರವೀಣ್ ಸೂದ್ ತಿಳಿಸಿದರು.

ENGLISH SUMMARY…

Gang rape case: Five, including one minor held-DG&IGP Praveen Sood
Mysuru, August 28, 2021 (www.justkannada.in): Director General of Police Praveen Sood has informed that five persons including a minor have been arrested concerning the gang rape case that took place in Mysuru.
Addressing a press meet held in Mysuru today he informed that seven teams were formed to nab the miscreants. The incident took place between 7 and 8 pm on August 24. The miscreants have confessed that they demanded Rs.3 lakh from the body and the girl who refused. “We still haven’t received any information from the victim. However, we collected a little information from her friend and we have arrested five people. I cannot reveal more as per the High Court instructions. All five of them belong to Tirupur in Tamil Nadu. There are six of them involved in the case. One has absconded. They were held based on technical and scientific evidence. All these used to visit Mysuru often and all of them are labourers, who were working as daily wagers and drivers. Out of them, one is a minor, aged around 17 years. But more investigation is required. While one has studied up to 8th standard, another person has studied up to 7th standard and the remaining of them are illiterates. All of them have a criminal background as per the preliminary investigations,” Praveen Sood informed.
Keywords: DGP/ Praveen Sood/ press meet/ gang rape case/ five held/ one minor

Key words: Gang rape –case- Arrest – five accused-  DG & IGP Praveen Sooda