ಜಗ್ಗೇಶ್ ‘ಕನ್ನಡ ಮೇಷ್ಟ್ರು’ ಟೀಸರ್ ರಿಲೀಸ್ ಮಾಡಲಿದ್ದಾರೆ ದರ್ಶನ್

ಬೆಂಗಳೂರು, ಅಕ್ಟೋಬರ್ 21, 2019 (www.justkannada.in): ನವರಸನಾಯಕ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದ ಟ್ರೈಲರ್ ನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಂಚ್ ಮಾಡುತ್ತಿದ್ದಾರೆ.

ಇಂದು ಸಂಜೆ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ಟ್ರೈಲರ್ ಬಿಡುಗಡೆಯಾಗಲಿದೆ. ಜಗ್ಗೇಶ್ ಗೆ ನಾಯಕಿಯಾಗಿ ಈ ಸಿನಿಮಾದಲ್ಲಿ ಮೇಘನಾ ಗಾಂವ್ಕರ್ ಅಭಿನಯಿಸಿದ್ದಾರೆ.

ಒಬ್ಬ ಸ್ಟಾರ್ ನಟರ ಸಿನಿಮಾ ಟ್ರೈಲರ್, ಅಡಿಯೋ ಲಾಂಚ್ ಇತ್ತೀಚೆಗೆ ಮತ್ತೊಬ್ಬ ಸ್ಟಾರ್ ಮಾಡುತ್ತಿರುವುದು ಸ್ಯಾಂಡಲ್ ವುಡ್ ನಲ್ಲಿ ಟ್ರೆಂಡ್ ಆಗುತ್ತಿದೆ.