ನವೆಂಬರ್ 10ಕ್ಕೆ ನಟ ರಿಷಿ ಮದುವೆ !

ಬೆಂಗಳೂರು, ಅಕ್ಟೋಬರ್ 21, 2019 (www.justkannada.in): ನಟ ರಿಷಿ ಮದುವೆ ದಿನಾಂಕ ಫಿಕ್ಸ್ ಆಗಿದೆ.

ಹೌದು. ರಿಷಿ ಮತ್ತು ಸ್ವಾತಿ ಮದುವೆ ದಿನಾಂಕ ರಿವೀಲ್ ಆಗಿದೆ. ಹೈದರಾಬಾದ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಈಗ ಚೆನ್ನೈನಲ್ಲಿ ಹಸೆಮಣೆ ಏರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ವೃತ್ತಿಯಲ್ಲಿ ಬರಹಗಾರ್ತಿಯಾಗಿರುವ ಸ್ವಾತಿ ಜೊತೆ ನಟ ರಿಷಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ರಿಷಿ ಮತ್ತು ಸ್ವಾತಿ ಮದುವೆ ನವೆಂಬರ್ 10 ರಂದು ನಡೆಯಲಿದೆ ಎಂದು ಹೇಳಲಾಗುತ್ತಿದೆ. ವಿಶೇಷ ಅಂದ್ರೆ ಇಬ್ಬರ ಮದುವೆ ಚೆನ್ನೈನಲ್ಲಿ ಜರುಗಲಿದೆ.