ವಜ್ರಮುನಿ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ‘ಮರ್ಯಾದಸ್ಥ’ ವಸಿಷ್ಠ ಸಿಂಹ

ಬೆಂಗಳೂರು, ಅಕ್ಟೋಬರ್ 21, 2019 (www.justkannada.in): ಸದ್ಯ ‘ಕೆಜಿಎಫ್-2’ ಮತ್ತು ‘ಸಲಗ’ಚಿತ್ರಗಳಲ್ಲೂ ನಟಿಸುತ್ತಿರುವ ವಸಿಷ್ಟ ಸಿಂಹ ಇದೀಗ ನಟಭಯಂಕರ ವಜ್ರಮುನಿ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದಾರೆ.

‘ಮರ್ಯಾದಸ್ಥ’ ಚಿತ್ರದಲ್ಲಿ ವಸಿಷ್ಟ ಸಿಂಹ ನಟಿಸುತ್ತಿದ್ದು, ಇದರಲ್ಲಿ ವಜ್ರಮುನಿ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.

ಈ ಪೋಸ್ಟರ್ ನಲ್ಲಿ ನಟ ವಜ್ರಮುನಿಯ ಫೋಟೋವಿದ್ದು ಜೊತೆಗೆ ನಟ ಭಯಂಕರ ವಜ್ರಮುನಿ ಅಭಿಮಾನಿಗಳ ಸಂಘ, ನ್ಯಾಯದಹಳ್ಳಿ, ಮಂಡ್ಯ ಎನ್ನುವ ಬೋರ್ಡ್ ಇದೆ. ಪಕ್ಕದಲ್ಲಿ ಮರ್ಯಾದಸ್ಥ ವಸಿಷ್ಠ ಎರಡು ಕೈ ಎತ್ತಿ ಮುಗಿಯುತ್ತಿರುವ ಚಿತ್ರವಿದೆ.