ಮುಂದಿನ ಸಿಎಂಗೆ ಬಿಎಸ್ ವೈ ಹೇಳಿದಂತೆ ಸಂಪೂರ್ಣ ಬೆಂಬಲ – ಶಾಸಕ ಎಂ.ಪಿ ರೇಣುಕಾಚಾರ್ಯ.

ಬೆಂಗಳೂರು,ಜುಲೈ,27,2021(www.justkannada.in): ಹೈಕಮಾಂಡ್ ಸೂಚನೆಯಂತೆ ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ಸಿಎಂಗೆ ಬಿಎಸ್ ವೈ ಹೇಳಿದಂತೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ತಿಳಿಸಿದ್ದಾರೆ.jk

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹೈಕಮಾಂಡ್ ಸೂಚನೆಯಂತೆ ಬಿಎಸ್ ವೈ ರಾಜೀನಾಮೆ ನೀಡಿದ್ದಾರೆ. ಹೈಕಮಾಂಡ್ ಸೂಚನೆಯನ್ನ ನಾವು ಪಾಲಿಸುತ್ತೇವೆ. ಆದರೆ ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೆ ಗೊತ್ತಿಲ್ಲ ಎಂದರು.

ರಾಜ್ಯದಲ್ಲಿ  ಬಿಜೆಪಿ ಸದೃಢವಾಗಿದೆ. ಮುಂದಿನ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಚುನಾವಣೆಗೆ ಒಟ್ಟಾಗಿ ಹೋಗುತ್ತೇವೆ. ಕಾಂಗ್ರೆಸ್ ನಾಯಕರು ಹಗಲುಗನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇನ್ನು ಸಚಿವ ಸ್ಥಾನಕ್ಕೆ ನಾನು ಲಾಬಿ ಮಾಡಿಲ್ಲ. ರಾಷ್ಟ್ರೀಯ ನಾಯಕರು ಅವಕಾಶ ನೀಡಿದರೇ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ತಿಳಿಸಿದರು.

ENGLISH SUMMARY…

Full support to the next CM: MLA M.P. Renukacharya
Bengaluru, July 27, 2021 (www.justkannada.in): “B.S. Yediyurappa has resigned from his post as per the instructions of the high command. We all will extend our complete support to the person whoever will become the Chief Minister,” said MLA M.P. Renukacharya.
Speaking in Bengaluru today he informed me that he doesn’t have any information about cabinet expansion. “B.S. Yediyurappa has resigned as per the instructions of the high command. We are committed to follow whatever high command says. But I don’t know what is their decision,” he added.
Replying to the Congress leaders’ comments he said “the BJP is strong in the State. We will only win the next elections. We all will unite for it and fight together. Congress leaders are daydreaming.”
On the occasion, he also clarified that he has not made any lobby for a ministerial berth. “If the national leaders give me any responsibility I will provide justice to whatever job that is assigned to me,” he added.
Keywords: BJP/ MLA M.P. Reunkacharya/ B.S. Yediyurappa/ high command/ complete support/ next CM

Key words: Full support -BS Yeddyurappa- next CM-MLA -MP Renukacharya.