ತಲೈವಾ ರಜನಿ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ ?!

ಬೆಂಗಳೂರು, 27, ಜುಲೈ 2021 (www.justkannada.in): ನಟಿ ದೀಪಿಕಾ ಪಡುಕೋಣೆ ತಲೈವಾ ರಜನಿ ಚಿತ್ರಕ್ಕೆ ನಾಯಕಿಯಾಗಲಿದ್ದಾರಂತೆ!?

ಹೌದು. ಸೂಪರ್ ಸ್ಟಾರ್ ರಜನಿಕಾಂತ್ ಮುಂದಿನ ಚಿತ್ರಕ್ಕೆ ದೀಪಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ರಜನಿ ಹೊಸ ಚಿತ್ರಕ್ಕೆ ದೇಸಿಂಗ್​ ಪೆರಿಯಸ್ವಾಮಿ ನಿರ್ದೇಶನ ಮಾಡಲಿದ್ದಾರಂತೆ. ಈಗಾಗಲೇ ದೇಸಿಂಗ್​ ಅವರು ರಜನಿಗೆ ಕಥೆ ಹೇಳಿದ್ದು, ಸೂಪರ್​​ಸ್ಟಾರ್​ ಇದನ್ನು ಇಷ್ಟಪಟ್ಟಿದ್ದಾರೆ. ಈ ಚಿತ್ರಕ್ಕೆ ದೀಪಿಕಾ ಆಯ್ಕೆಯಾಗುವ ಸಾಧ್ಯತೆ ಇದೆ.

ಇನ್ನು ರಜನಿಕಾಂತ್ ಅವರ 170 ನೇ ಚಿತ್ರಕ್ಕೆ ನಟ ಹಾಗೂ ನಿರ್ಮಾಪಕ ಧನುಷ ಅವರು ನಿರ್ದೇಶನ ಮಾಡಲಿದ್ದಾರೆ.