ಟಿಆರ್’ಪಿ ಹೋರಾಟದಲ್ಲಿ ದಾಖಲೆ ಬರೆದ ಜೀ ಕನ್ನಡದ ‘ಜೊತೆ ಜೊತೆಯಲಿ’

ಬೆಂಗಳೂರು, ನವೆಂಬರ್ 23, 2019 (www.justkannada.in): ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಟಿಆರ್ ಪಿ ಲೋಕದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.

ಆರಂಭದಲ್ಲಿಯೇ 11.5 ಟಿಆರ್ ಪಿ ಪಡೆದಿದ್ದ ಜೊತೆ ಜೊತೆಯಲಿ ಬಳಿಕ 13.5 ಕ್ಕೆ ಟಿಆರ್ ಪಿ ಪಡೆದುಕೊಂಡಿತ್ತು. ಈ ವಾರ ಅದನ್ನೂ ಮೀರಿ 15.2 ಟಿಆರ್ ಪಿ ಅಂಕ ಪಡೆದು ಹೊಸ ದಾಖಲೆ ಬರೆದಿದೆ.

ಈ ವಿಚಾರವನ್ನು ಖುಷಿಯಿಂದಲೇ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿರುವ ನಟ ಅನಿರುದ್ಧ್ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.